Monday, October 17, 2011

ಸುಧಾರಿಸಬೇಕಾದ ಭಾರತದ ವಿದೇಶಾಂಗ ನೀತಿ

ಹಾಯ್,

ಯಾವುದೇ ದೇಶಕ್ಕೆ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು, ಶತ್ರುಗಳನ್ನು ಮಟ್ಟ ಹಾಕಲು ನಮ್ಮ ರಕ್ಷಣಾ ಪಡೆಗಳಷ್ಟೇ ಅಲ್ಲ ಸಮರ್ಥ ವಿದೇಶಾಂಗ ನೀತಿಯ ಅವಶ್ಯಕತೆಯಿದೆ.  ನಮ್ಮ ರಾಷ್ಟ್ರದ ಸುತ್ತಲೂ ಶತ್ರುಗಳೂ ಸನ್ನದ್ದರಗುತ್ತಿರುವುದು ಹಗರಣಗಳಲ್ಲಿ ಮುಳುಗಿರುವ ನಮ್ಮ ರಾಜಕಾರಣಿಗಳಿಗೆ ಕಾಣಿಸುತ್ತಿಲ್ಲ. 

ನಾವಂದುಕೊಂಡಂತೆ ವಿದೇಶಾಂಗ ನೀತಿಯಲ್ಲಿ ಕಣ್ಣಿಗೆ-ಕಣ್ಣು ಎನ್ನುವ ನಿಯಮವನ್ನು ಅನುಸರಿಸಲಾಗುವುದಿಲ್ಲ ನಿಜ, ಆದರೆ ನಮ್ಮ ವಿದೇಶಾಂಗ ನೀತಿ ನೋಡಿದರೆ ಅದರಲ್ಲಿ ಒಂದು ಗತ್ತು,  agression ಇಲ್ಲ ಎನಿಸುತ್ತದೆ.  ಬನ್ನಿ ನೋಡೋಣ.

ಪಾಕಿಸ್ತಾನ:
ಮೊದಲು, ಭಾರತ ಎನ್ನುವ ಪದಗಳನ್ನೇ ಭೂಮಿಯಿಂದ ಅಳಿಸಲು ಪ್ರಯತ್ನಿಸುತ್ತಿರವ ಪಾಕಿಸ್ತಾನದ ಬಗ್ಗೆ ಗಮನಿಸೋಣ. ಪಾಕಿಸ್ತಾನ ನಮ್ಮ ದೇಶದಲ್ಲಿ ಮಾಡುತ್ತಿರುವ ಕಿತಾಪತಿ ಎಲ್ಲರಿಗೂ ಗೊತ್ತಿದೆ. ಕಾಶ್ಮೀರ ಇರಬಹುದು, ಬಾಂಬ್ ಸ್ಪೋಟಗಳು, ಕೋಟಾ ನೋಟುಗಳಿರಬಹುದು ಎಲ್ಲದರಲ್ಲೂ ಆದ ಕೈವಾಡವಿದೆ.  ಆದರೆ ನಮ್ಮ ದೇಶವವರು ಕಡ್ಲೆ ಪುರಿ ತಿನ್ನುತ್ತಿದರೆಯೇ ಗೊತ್ತಾಗುತ್ತಿಲ್ಲ.

೧. ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಒಂದು ದೊಡ್ಡ ಸ್ವಾತಂತ್ರ್ಯ ಹೋರಾಟವೆ ನಡೆಯುತ್ತಿದೆ.  ಅದಕ್ಕೆ ನಮ್ಮ ದೇಶದವರ ಕುಮ್ಮಕ್ಕು ಇದೆಯಂದು ಪಾಕಿಸ್ತಾನಕ್ಕು ಸಹ ಸಾಕ್ಷ್ಯ ಕೊಡಲಾಗುತ್ತಿಲ್ಲ. ಅಮೆರಿಕ ಕೂಡ ಅಲ್ಲಿ ಭಾರತದ ಕೈವಾಡವಿಲ್ಲ ಎಂದು ಹೇಳುತ್ತಿದೆ. ಬಲೂಚಿ ಹೋರಾಟಗಾರರೂ ಕೂಡ ನಮಗೆ ಭಾರತದಿಂದ ಸಹಾಯ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದಾರೆ.  ಶತ್ರು ದೇಶದಲ್ಲಿ ಇಂತಹ ಒಂದು ಅವಕಾಶವನ್ನು ಕೈ ಬಿಡುವ ಮೂರ್ಖತನ ಇನ್ನೊಂದಿಲ್ಲ.

೨ . ನಿರಂತರವಾಗಿ ಉಗ್ರರೂ ನುಸುಳಿ ಇಲ್ಲಿ ದಾಂದಲೆ ಮಾಡುತ್ತಿದ್ದರೂ, ಪಾಕಿಸ್ತಾನಕ್ಕೆ ಪಾಟ ಕಲಿಸುವ ದಮ್ಮಿಲ್ಲ. ಅವರಿಗಿಂತ ದೂಡ್ಡ ಸೇನೆ, ಹೆಚ್ಚು ಯುದ್ದ ವಿಮಾನಗಳು, ನೌಕಾಪಡೆ , ಮಿಸೈಲ್ ಗಳು ಇದ್ದು ಯಾವ ಉಪಯೋಗ. ಬಹುಶಃ ಆಯುಧ ಪೂಜೆಯೆಂದು ಪೂಜಿಸಲು ಇರಬೇಕು.

೩ . ತೊಂಬತ್ತಾರ ದಶಕದಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಯುದ್ಧ ವಿಮಾನ ಪೂರೈಕೆ ನಿಲ್ಲಿಸಿತು. ಆಗ ಪಾಕಿಸ್ತಾನಕ್ಕೆ ಕಾಣಿದ್ದು ಚೀನ. ಚೈನ ಇಂದು ಪಾಕಿಸ್ತಾನಕ್ಕೆ ತಾನು ತಯಾರಿಸುವ ಅತ್ಯಾದುನಿಕ ಜೆ‌ಎಫ್-17 ಪೂರೈಸುತ್ತಿದೆ. (ಈ ವಿಮಾನ ಕೂಡ ನಮ್ಮ ತೇಜಸ್ ನಂತೆ ದೇಶಿಯವಾಗಿ ತಯಾರಿಸಿದ್ದು) . ಆದರೆ ಇದರಲ್ಲಿ ಬಳಕೆಯಾಗುವುದು ರಷ್ಯಾದ RD-93 ಇಂಜಿನ್ ಗಳು(ನಮ್ಮ ತೇಜಸ್ ನಲ್ಲಿ ಬಳಕೆಯಾಗುವುದು ಅಮೆರಿಕದ GE ಇಂಜಿನ್ ಗಳು ;-) ). ರಷ್ಯಾ ನಮ್ಮ ಪರಮಾಪ್ತ ರಾಷ್ಟ್ರವಾದರೂ ಕೂಡ (ಅವರಿಗೆ ನಾವೇ ಅತೀ ಹೆಚ್ಚು ಮಿಲಿಟರಿ ವ್ಯಾಪಾರ ಮಾಡುವುದು) ನಮ್ಮಿಂದ ಏನು ಮಾಡಲಾಗಿಲ್ಲ.

೪ . ಪಾಕಿಸ್ತಾನಕ್ಕೆ ಉಗ್ರರ ವಿರುಧ್ಧ ಹೊರಡಲೂ ಅಮೆರಿಕ ಪಾಕಿಸ್ತಾನಕ್ಕೆ ಬಿಲ್ಲಿಯಾಂತರ ಡಾಲರ್ ಕೊಡುತ್ತಿದೆ. ಇದೇನೋ ಸರಿ. ಗನ್ನು, ಬಾಂಬ್ ಗಳನ್ನು ಕೊಡಲಿ. ಆದರೆ ಅವರನ್ನು ಹೆಚ್ಚು ಓಲೈಸಲು ಅವರಿಗೆ ಅತ್ಯಾಧುನೀಕ PC-3 ಒರಿಯಾನ್ ವಿಮಾನಗಳನ್ನು, UAV (Unmanned Aircraft Vehicle) ಪೂರೈಸುತ್ತಿದೆ. ಖಂಡಿತವಾಗಿಯೂ ಇವುಗಳ ಉಪಯೋಗವಾಗುವುದು ಉಗ್ರರ ವಿರುದ್ದವಲ್ಲ, ಭಾರತದ ವಿರುದ್ದ.
ಅಮೆರಿಕದ ಮಾತು ಕೇಳಿ ಭಾರತ ಇರಾನ್ ನೊಂದಿಗಿನ ಸಂಬಂಧವನ್ನು ಕಡೆದುಕೊಳ್ಳುತ್ತದೆ. ಅಮೆರಿಕ ತನಗೆ ಭಾರತ ಅತ್ಯುತ್ತಮೆ ಸ್ನೇಹಿತ ಎಂದು ಬೊಗಳೆ ಹೊಡೆಯುತ್ತದೆ. ಆದರೆ ಅಮೆರಿಕ ಪಾಕಿಸ್ತಾನಕ್ಕೆ ಕೊಡುವ ಅತ್ಯಾಧುನೀಕ ಶಸ್ತ್ರಗಳನ್ನು ತಡೆಯುವ ತಾಕತ್ತಿಲ್ಲ ನಮಗೆ.

೫ .  ಪ್ರತಿ ಸಲ ನಡೆಯುವ Organization  of  Islamic Conference ಸಭೆಗಳಲ್ಲಿ - ಎಲ್ಲ ಮುಸಲ್ಮಾನ ರಾಷ್ಟ್ರಗಳು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಪರವಾದ ವಾದವನ್ನೇ ಬೆಂಬಲಿಸುತ್ತವೆ. ನಾವು ಇದನ್ನು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತೇವೆ. ಇಷ್ಟೇ ಆದರೆ ಸಾಕಿತ್ತೇನೋ ? ಆದರೆ ನಮ್ಮ ಪ್ರತಿನಿಧಿಗಳು ಒಂದು ಹೆಜ್ಜೆ ಮುಂದೆ ಹೋಗಿ ಇಸ್ರೇಲ್ - ಪಾಲೆಸ್ತಿನ್ ವಿಚಾರದಲ್ಲಿ ಗಂಟಾ-ಘೋಷವಾಗಿ ಆ ಮುಸಲ್ಮಾನ ರಾಷ್ಟ್ರಗಳನ್ನೇ ಬೆಂಬಲಿಸುತ್ತೇವೆ.

 ೬  . ಲಿಬ್ಯಾದ ಮಾಜಿ ಸರ್ವಾಧಿಕಾರಿ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಕಟ್ಟಾ ಬೆಂಬಲಿಗ. ಅವನ ಹೆಸರಿನಲ್ಲಿ ಪಾಕ್ ನಲ್ಲಿ "ಗಡಾಫಿ" ಕ್ರಿಕೆಟ್ ಸ್ಟೇಡಿಯಂ ಇದೆ.  ಮೊನ್ನೆ ಅಮೆರಿಕ ಮಿಲಿಟರಿ ಕಾರ್ಯಚರಣೆಯಲ್ಲಿ ಇವನ್ನನ್ನು ಒದ್ದೋಡಿಸುವಾಗ, ಅವರನ್ನು ಬಾಯಿ ಮಾತಿನಲ್ಲಾದರೂ ಬೆಂಬಲಿಸುವ ಬದಲು ಏನು ನಡೆದೇ ಇಲ್ಲವೆಂಬಂತೆ ಇದ್ದರು ನಮ್ಮ ವಿದೇಶಾಂಗ ಸಚಿವರು.

ಚೀನಾ:
ಈ ಚೀನಿ ಕುಳ್ಳರ ಕಿತಾಪತಿ ಪಾಕಿಸ್ತಾನಕ್ಕಿಂತ ಜಾಸ್ತಿ.

೧.  ಅರುಣಾಚಲ ಪ್ರದೇಶ ಬೇಕು ಅಂತ ಯುದ್ಧ ಮಾಡಿದ ಚೀನಾ ನಮ್ಮ ಜಮ್ಮು ಕಾಶ್ಮೀರದ ೧/೩ ಭಾಗ ಆಕ್ರಮಿಸಿಕೊಂಡಿದೆ.
 ಅವಕಾಶ ಸಿಕ್ಕಾಗಲೆಲ್ಲ ತನಗೆ ಅರುಣಾಚಲ ಪ್ರದೇಶ ಬೇಕು ಅಂತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬೊಬ್ಬೆ ಹಿಡಿಯುತ್ತದೆ.

ಅಲ್ಲ ಗುರುವೇ, ಚೀನಾ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗವನ್ನು   (aksai - ಚೀನಾ ) ತನಗೆ ವಾಪಾಸ್ ಬಿಟ್ಟುಕೊಡು ಎಂದು ಭಾರತ ಕೇಳಿದ ನಿದರ್ಶನವೇ ಇಲ್ಲ.

೨. ಹಿಂದೂಗಳಿಗೆ ಪವಿತ್ರವಾದ ಕೈಲಾಸ ಪರ್ವತ ಚೀನಾದ ಹಿಡಿತದಲ್ಲಿದೆ. ಇದರ ಮೇಲೆ ಚೀನಾ ಹೇಗೆ ಹಕ್ಕನ್ನು ಸಾದಿಸುತ್ತದೆಯೋ ಗೊತ್ತಿಲ್ಲ, ಆದರೆ ರಾಜಕಾರಾಣಿಗಳಿಗೆ ಇದು ತಿಳಿದಂತೆ ತೋರುವುದಿಲ್ಲ.

೩. ನಮ್ಮ ಈಶಾನ್ಯ ರಾಜ್ಯಗಳಲ್ಲಿ - ULFA , NSCN ಭಯೋತ್ಪಾದಕರಿಗೆ ಚೀನಾದ ಸಂಪೂರ್ಣ ಕುಮ್ಮಕ್ಕಿದೆ.   ಹೀಗೆಯೇ ಚೀನಾಗೆ ಕೂಡ ಸಿನ್ಕಿಯಂಗ್ ರಾಜ್ಯದಲ್ಲಿ ಮುಸ್ಲಿಂ ಉಗ್ರರ ಉಪಟಳವಿದೆ.  ಇದರಲ್ಲಿ ಭಾರತ ಕೈವಾಡವಿದೆ ಎಂದು ಭಾವಿಸಿದರೆ ನೀವು ಮತ್ತೆ ತಪ್ಪಿದ್ದಿರ.  ಇನ್ನೊಂದು ಆಶ್ಚರ್ಯದ ವಿಷಯವೆಂದರೆ ಇವರಿಗೆ ಕುಮ್ಮಕ್ಕು ಸಿಗುತ್ತಿರುವುದು - ಪಾಕಿಸ್ತಾನದ ಮುಸ್ಲಿಂ ಉಗ್ರರಿಂದ ;-) . ಆದರೆ ಪಾಕಿಸ್ತಾನ ಸರಕಾರ ಏನೋ ಇದರಿಂದ ದೂರ ಉಳಿದಿದೆ.

೪. ನಮ್ಮಲ್ಲಿ ಟಿಬೆಟ್ಟಿನ ಜನರು ದಂಡಿಯಾಗಿ ಬಿದ್ದಿದ್ದರೆ. ಇವರಿಗೆ ಸರಿಯಾಗಿ ತರಬೇತಿ, ಮಾರ್ಗದರ್ಶನ ಕೊಟ್ಟು ಚೀನಾದ ವಿರುದ್ಧ ಸ್ವಾತಂತ್ರ್ಯಕ್ಕೆ ದಂಗೆ ಏಳಲು ಹುರಿದುಂಬಿಸುವುದು ಭಾರತಕ್ಕೆ ಕಷ್ಟವಲ್ಲ.  ಇವರು ಚೀನಾದ ವಿರುದ್ದ ಭಾರತದ ಅತ್ಯುತ್ತಮ ಅಯುಧವಾಗಬಲ್ಲರು.

೫. ಚೀನಾ ಕ್ಯಾತೆ ತೆಗೆಯದೆ ಇರುವ ನೆರೆ ರಾಷ್ಟ್ರಗಳು ತುಂಬಾ ಕಡಿಮೆ. ಭಾರತದಂತೆಯೇ ವಿಯೆಟ್ನಾಂ ಕೂಡ ಚೀನಾದ ಬದ್ದ ವೈರಿ. ಇದರೊಂದಿಗೆ ಭಾರತದ ಸಂಬಂದ ಸುಧಾರಿಸುತ್ತಿದೆ .  ಮೊನ್ನೆ ಭಾರತ ನೌಕಪದೆ ವಿಯೆಟ್ನಾಂಗೆ ಭೇಟಿ ಕೊಟ್ಟಾಗ - ಚೀನಾದ ಯುಧ ನೌಕೆಯೊಂದಿಗೆ ತಕರಾರು ನಡೆಯಿತು (ಇದು ನಮ್ಮನ್ನು ಹೆದರಿಸಲು ಚೀನಾ ನಡೆಸಿದ ಕುತಂತ್ರ).  ವಿಯೆಟ್ನಾಂ  ಏನೋ ಚೀನಾಗೆ ಚೆನ್ನಾಗಿ ಬೆದರಿಸಿತು, ಆದರೆ ನಮ್ಮ ಪುಕ್ಕಲು ವಿದೇಶಾಂಗ ಸಚಿವಾಲಯ ಏನು ದೊಡ್ಡ  ಘಟನೆ ನಡೆದೇ ಇಲ್ಲ ಎಂಬಂತೆ ಹೇಳಿಕೆ ಕೊಟ್ಟಿತು.

೬. ಚೀನಾ ನಮ್ಮ ಸುತ್ತಲು ಶತ್ರುಗಳನ್ನು ಎತ್ತಿ ಕಟ್ಟುತ್ತಿದೆ - ಪಾಕಿಸ್ತಾನ , ಬರ್ಮಾ.  ಶ್ರೀಲಂಕಾಗೆ ಸ್ನೇಹ ಹಸ್ತ ಚಾಚುತ್ತಿದೆ. ಮೊನ್ನೆ ಶ್ರೀಲಂಕಾದ ಪ್ರಧಾನಿ ಚೀನಾವನ್ನು ಹೊಗಳುತ್ತಿದರು. ಇತ್ತ  ಚೀನಾ ನಮ್ಮನ್ನು ಸುತ್ತುವರೆಯುತ್ತಿರಬೇಕಾದರೆ ಅತ್ತ ಅದರ ತೊಂದರೆ ಎದುರಿಸುತ್ತಿರುವ - ದಕ್ಷಿಣ ಕೊರಿಯ, ಜಪಾನ್ ನೊಂದಿಗೆ ಯಾವುದೇ ರಕ್ಷಣಾ ಒಪ್ಪಂದ ಮಾಡಿಕೊಂಡಿಲ್ಲ.  ಚೀನಾಗೆ ನಾವು ಹೆದರಿಕೊಂಡು - ತೈವಾನ್ ದೇಶವನ್ನು ಗುರುತಿಸಿಯೇ ಇಲ್ಲ.  ನಮ್ಮ ಪುಕ್ಕಳು ತನಕ್ಕೆ ಎಲ್ಲೇ ಇಲ್ಲ ಎನಿಸುತ್ತದೆ.

ನೇಪಾಳ:
ಇದು ಭಾರತದ ಉತ್ಯುತ್ತಮ ಸ್ನೇಹಿತವಾಗಿತ್ತು . ಅಲ್ಲಿನ ರಾಜರು ಭಾರತ ಪರವಾಗಿದ್ದರು. ಜಗತ್ತಿನ ಏಕೈಕ ಹಿಂದೂ ರಾಷ್ಟ್ರವಾಗಿತ್ತು.

ಅಲ್ಲಿನ ಕಮ್ಯುನಿಸ್ಟರು, ಚೀನಾದ ಸಹಾಯದೊಂದಿಗೆ  ದಂಗೆ ಎದ್ದು  ತಮ್ಮ ಸರಕಾರವನ್ನು ಸ್ಥಾಪಿಸಿಕೊಂಡಿದ್ದಾರೆ.  ಇವರುಗಳು ಭಾರತಕ್ಕೆ ಶತ್ರುಗಳಲ್ಲ್ದಿದ್ದರು ಚೀನಾಕ್ಕೆ ಹೆಚ್ಚು ಆಪ್ತ.  ಭಾರತ ನೇಪಾಳಕ್ಕೆ ಗುಪ್ತವಾಗಿಯೋ, ಬಹಿರಂಗವಾಗಿಯೂ ಸಹಾಯ ಕೊಟ್ಟು ಅಲ್ಲಿನ ಕಮ್ಯುನಿಸ್ಟರನ್ನು ದೂರ ಇಡುವುದು ಕಷ್ಟವಾಗುತ್ತಿರಲಿಲ್ಲ. (ಪಕ್ಕದಲ್ಲಿರು ಸಣ್ಣ ದೇಶಗಳಲ್ಲಿ ತಮ್ಮ ಸರಕಾರವನ್ನು ಸ್ಥಾಪಿಸುವ ಕೆಲಸವನ್ನು ಎಲ್ಲ ಶಕ್ತ ರಾಷ್ಟ್ರಗಳು ಮಾಡುತ್ತಿರುತ್ತವೆ ) ಇದು ನಮ್ಮ ವಿದೇಶಾಂಗ ನೀತಿಯ ದಿವಾಳಿತನ ತೋರಿಸುತ್ತದೆ.

ಬಾಂಗ್ಲಾದೇಶ:
ನಾವು ಇದಕ್ಕೆ ನಮ್ಮ ರಕ್ತ ನೀಡಿ ಸ್ವಾತಂತ್ಯ್ರ ಕೊಟ್ಟರು - ನಮಗೆ ಸಿಕ್ಕ ಗೌರವ ಅಷ್ಟಕಷ್ಟೇ.  ಇಸ್ಲಾಂ  ಮೂಲಭೋತವಾದ ಹೆಚ್ಚ್ಗಿದ್ದರು ನಮ್ಮ ಸರಕಾರ ಕಣ್ಣು ಮುಚ್ಚಿಕೊಂಡು ಬಿದ್ದಿದೆ.

ಅಲ್ಲಿನ ವಿರೋಧಿ ಪಕ್ಷ - ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಭಾರತ ವಿರೋಧಿ ದೋರಣೆ ಇದೆ. ಅದು ಅಧಿಕಾರಕ್ಕೆ ಬರದಿರುವಂತೆ ಮಾಡಲು ಭಾರತಕ್ಕೆ ಕಷ್ಟವೇನಲ್ಲ (ದುಡ್ಡು ಮತ್ತು ಗೂಡಾಚಾರಿಕೆ ಉಪಯೋಗಿಸಿ ). 

ಬಾಂಗ್ಲಾದೇಶದೊಂದಿಗೆ ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಅದರೊಂದಿಗೆ ಗಡಿ ಭಾಗದ ಭೂಮಿ ಬದಲಾವಣೆ ಮಾಡಲು ಒಪ್ಪಿದ್ದೇವೆ. ಇದರಲ್ಲಿ ಭಾರತ ಬಾಂಗ್ಲಾದೇಶಕ್ಕೆ 10,000 (ಹತ್ತು ಸಾವಿರ ) ಎಕರೆ ಹೆಚ್ಚಿಗೆ ಭೂಮಿಯನ್ನು ಕಡಲು ಒಪ್ಪಿದೆ . ಇದನ್ನು ನೋಡಿ ಏನನ್ನಬೇಕೂ ಗೊತ್ತಾಗುತ್ತಿಲ್ಲ

ಬರ್ಮಾ:
ಬರ್ಮದಲ್ಲಿ ಮಿಲಿಟರಿ ಆಡಳಿತ ಬಂದ ಮೇಲೆ, ಅದನ್ನು ವಿರೋಧಿಸಿ ಭಾರತ ಅದರೊಂದಿಗೆ ಸಂಬಂಧ ಕಡಿಮೆ ಮಾಡಿತು.
ಬರ್ಮದಲ್ಲಿ ಮಿಲಿಟರಿ ಆಡಳಿತ ಇದ್ದರೆ ನಮಗೆ ಏನಪ್ಪಾ ಆಗಬೇಕು, ನಮ್ಮ ಅವಶ್ಯಕತೆ ಮೊದಲು ನೋಡಬೇಕು ತಾನೇ ?  ಇಲ್ಲಿ ಚೀನಾಕ್ಕೆ ಒಂದು ಒಳ್ಳೆಯ ಅವಕಾಶ ದೊರೆಯಿತು.

ಆದರೆ 1990 ರ ದಶಕದಲ್ಲಿ ಭಾರತ ತನ್ನ ನಡುವಳಿಕೆಯನ್ನು ಬದಲಾಯಿಸಿ ಅದರೊಂದಿಗೆ ಸ್ನೇಹ ಮಾಡಿತು.  ಈಗ ಪರಿಸ್ಥಿತಿ  ಸುದಾರಿಸಿದೆ. ಮೊನ್ನೆ ಮೊನ್ನೆ ನಮ್ಮ ವಿದೇಶಾಂಗ ಸಚಿವರ ಒಂದು ಹೇಳಿಕೆ ಕೊಟ್ಟರು -" ಬರ್ಮಾದ ಜನರೇ ಅಲ್ಲಿನ ಪ್ರಜಾತಂತ್ರ ವ್ಯವಸ್ಥೆಗೆ ಹೋರಾಡಬೇಕು., ಭಾರತ ಮಧ್ಯೆ ಪ್ರವೇಶಿಸುವುದಿಲ್ಲ."

ಆದರೂ ಚೀನಿ ಪ್ರಭಾವ  ತಗ್ಗುವ ಲಕ್ಷಣಗಲಿಲ್ಲ.

ತ್ರಿನಿದಾದ್, ಫಿಜಿ, ಗುಯನ, ಮಾರಿಷಸ್:
ಇಲ್ಲೆಲ್ಲೇ ಭಾರತೀಯರು ಬಹುಸಂಖ್ಯೆಯಲ್ಲಿ ಇದ್ದಾರೆ. ಆದರೆ ಭಾರತ ಈ ದೇಶಗಳನ್ನು ನಮ್ಮೊಂದಿಗೆ ಯಾವುದೇ ರೀತಿಯಲ್ಲಿ ತೊಡಗಿಸಿ ಕೊಳ್ಳಲು ಯಾವುದೇ ಪ್ರಯತ್ನ ಮಾಡಿದಂತಿಲ್ಲ.

ಕೊನೆ ಹನಿ: ಇನ್ನೂ ಖಾಯಂ ಸದಸ್ಯತ್ವ ಬೇಕೆ?
ಭಾರತ ವಿಶ್ವ ಸಂಸ್ಥೆಯಲ್ಲಿ ಕಾಯಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ.  ಆ ಸ್ಥಾನ ಇರುವುದು - ತಾಕತ್ತು ಇರುವವರಿಗೆ,  ಜಗತ್ತಿನಲ್ಲಿ ಬೇರೆ ದೇಶಗಳ ಮೇಲೆ ಪ್ರಭಾವ ಬೀರುವ ಶಕ್ತಿ ಇರುವವರಿಗೆ - ಜನ ಸಂಖ್ಯೆ ತೋರಿಸಿ ಗಳಿಸುವ ಸ್ಥಾನವಲ್ಲ.

Saturday, October 15, 2011

ಒಂದು ಶಿಶು ಗೀತೆ

ನಾನು ಮಗಳಿಗೆ ಬರೆದೆ ಗೀತೆ

ಜೋ ಜೋ ಬಂಗಾರಿ
ಮಲಗು ಮುದ್ದು ಸಿಂಗಾರಿ

ಹಾರು ಕುದುರೆ ಬೆನ್ನೇರಿ
ಆಡು ಕನಸಿನ್ ಲೋಕದಲ್ಲಿ

ಬಂದರೆ ಆಗ ಗುಮ್ಮ
ಅಡುಗು ನೀನು ಚಿನ್ನ

ನಗುತಾ ಇರು ರನ್ನ
ಮಲಗು ನೀನು ಚೆನ್ನ


 :-)