ಗೆಳೆಯರೇ,
ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧೦೦ ವರೆಗೂ ಜಾಸ್ತಿಯಾಯಿತು? ಆರ್ಥಿಕ ಸಂಕಷ್ಟವಾದಾಗ ಅಮೆರಿಕ ಏಕೆ , ೯೦ರ ದಶಕದಲ್ಲಿ ಭಾರತದಂತೆ ಚಿನ್ನವನ್ನು ಒತ್ತೆ ಇಡಲಿಲ್ಲ ? ಅಮೆರಿಕಾವು ತೈಲಕ್ಕಾಗಿಯೇ (ತನ್ನ ಹತ್ತಿರವೇ ಸಾಕಷ್ಟು ಇದ್ದರು ) ಇರಾಕ್ ಮೇಲೆ ಯುದ್ಧ ಸಾರಿತೆ? ಇದು ನಿಜವೇ?
ಇದಕ್ಕೆಲ್ಲ ಉತ್ತರ ಒಂದೇ - ಪೆಟ್ರೋ ಡಾಲರ್. ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ.
ಈ ಕಥೆ ಶುರುವಾಗುವುದು ಎರಡನೆಯ ಮಹಾಯುದ್ಧದ ನಂತರ. ಇಡೀ ಯುರೋಪೆ, ಸಂಪನ್ಮೂಲ ಕೊರತೆಯಿಂದ, ಹಣದ ಕೊರತೆಯಿಂದ ಬಳಲುತ್ತಲಿತ್ತು. ಆಗ ಅಮೆರಿಕ ಸರ್ಕಾರ , ಯೂರೋಪಿಗೆ ಸಹಾಯ ಮಾಡಿ, ಸಂಪನ್ಮೂಲಗಳನ್ನು ಹಾಗು ಅಮೆರಿಕಾದ ಕಂಪನಿಗಳಿಂದ ನೆರವನ್ನು ಪಡೆಯಲು ಡಾಲರ್ ನೀಡಿತು. ಯುದ್ಧದ ನಂತರ, ಅಮೆರಿಕದ ಆರ್ಥಿಕತೆಯು ಸದೃಡ ಹಾಗು ಬಲಿಷ್ಟವಾಯಿತು ... ಈ ಎಲ್ಲ ಕಾರಣಗಳಿಂದ ಅಮೆರಿಕಾದ ಡಾಲರ್ ಗೆ, ಜಗತ್ತಿನಲ್ಲಿ ಬಹಳ ಮಹತ್ವ ಬಂತು.
ಸರಿ ಸುಮಾರು ಎರಡನೇ ಮಹಾಯುದ್ಧದ ನಂತರ, ಪೆಟ್ರೋಲ್ ಮೂಲಕ, ಅರಬರಿಗೆ ಸಂಪತ್ತು ಹರಿದುಬರತೊಡಗಿತು. ಬಂದ ದುಡ್ಡನ್ನು ಹೇಗೆ ಇಡಬೇಕೆಂದು ಯೋಚಿಸುತ್ತಿರುವಾಗ, ಜಗತ್ತಿನಲ್ಲಿ ಎಲ್ಲ ಕಡೆ ಬೆಲೆಯಿರುವ ಡಾಲರ್ ನಲ್ಲಿ ಸಂಗ್ರಹಿಸಲು ಯೋಚಿಸಿ, ತೈಲ ವ್ಯಾಪಾರಕ್ಕಾಗಿ ಎಲ್ಲ ದೇಶಗಳಿಂದ ಡಾಲರ್ ಕೇಳತೊಡಗಿದರು . ಈಗ ತಗೊಳ್ಳಿ ಡಾಲರ್ ಗೆ ಚಿನ್ನದ ಬೆಲೆ ಬಂತು. ಜಗತ್ತಿನಲ್ಲಿ ಡಾಲರ್ ಹುಚ್ಚು ಪ್ರಾರಂಭವಾಯಿತು. ಎಲ್ಲರು ಡಾಲರ್ ಗಾಗಿ, ಅಮೆರಿಕಾಗೆ ರಫ್ತು ಮಾಡುತ್ತಿದ್ದಾರೆ. ಈಗ ಅಮೇರಿಕಾದಲ್ಲಿ ಎಲ್ಲವೂ ಕಡಿಮೆ ಬೆಲೆಗೆ ದೊರೆತು, ಅಲ್ಲಿ ಜನರ ಜೀವನ ಮಟ್ಟ ಮತ್ತೂ ಪ್ರಗತಿ ಕಂಡಿತು. (ಆದರೆ - ಬೇರೆ ದೇಶದ ಜನರು, ಡಾಲರ್ ಗಾಗಿ ತಮ್ಮ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡಿಕೊಳ್ಳುತ್ತಿದ್ದರೆ. ಹಾಗು ಈ ಸಂಪತ್ತು ಕೆಲವೇ ಕೆಲವು ಜನರ ಕೈಯಲ್ಲಿ ನಲಿದಾಡುತ್ತಿದೆ. ಉದಾಹರಣೆ: ಗಣಿ ಧಣಿಗಳು ಅದಿರು ರಫ್ತು ಮಾಡುತ್ತಿರುವ ಹಾಗೆ. ಇಷ್ಟೇ ಅಲ್ಲ ನಮ್ಮ ದೇಶದ ಉತ್ಕೃಷ್ಟ ಬಾಸ್ಮತಿ ಅಕ್ಕಿ, ಕಾಶ್ಮೀರದ ಆಪಲ್ ಎಲ್ಲವು ನಿಮಗ ಕಡಿಮೆ ಬೆಲೆಗೆ ಅಮೇರಿಕಾದಲ್ಲಿ ಸಿಗುತ್ತದೆ. ನಮಗೆ ಎರಡನೇ ದರ್ಜೆಯ ವಸ್ತುಗಳು). ಇಂದು ಜಗತ್ತಿನಲ್ಲಿ ಸುಮಾರು ೩೦೦ ವರ್ಷಗಳಿಂದ ಇತ್ತೀಚೆನವರೆಗೆ, ಮುದ್ರಿಸಿರುವ ಎಲ್ಲ ಡಾಲರ್ ನೋಟುಗಳಲ್ಲಿ , ಅರ್ಧಕ್ಕಿಂತ ಹೆಚ್ಚಿನ ನೋಟುಗಳು ಅಮೆರಿಕಾದ ಹೊರಗೆ, ವಿವಿಧ ದೇಶಗಳ ಖಜನೆಗಳಲ್ಲಿದೆ.
ಯಾವುದೇ ದೇಶವು, ತನ್ನು ನೋಟುಗಳನ್ನು ಯದ್ವಾ-ತದ್ವ ಮುದ್ರಿಸುವುದಿಲ್ಲ. ಹಾಗೇನಾದರು ಮುದ್ರಿಸಿದರೆ - ತಡೆಯಲಾಗದ ಹಣದುಬ್ಬರವಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿದು ಬೀಳುತ್ತದೆ. (ಜಿಂಬಾಬ್ವೆ - ಇದಕ್ಕೆ ಉದಾಹರಣೆ) . ಹಾಗಾಗಿ ದೇಶಗಳು - ತಮ್ಮಲಿರುವ ಚಿನ್ನದ ಸಂಗ್ರಹವನ್ನು ಅನುಸರಿಸಿ ನೋಟನ್ನು ಮುದ್ರಿಸುತ್ತವೆ . ಇದೆ ಕಾರಣಕ್ಕಾಗಿಯೇ ಭಾರತವು ೧೯೯೦ ರಲ್ಲಿ ಚಿನ್ನವನ್ನು, ವಿಶ್ವ ಬ್ಯಾಂಕ್ನಲ್ಲಿ ಚಿನ್ನವನ್ನು ಇಟ್ಟು , ದುಡ್ಡನ್ನು ತಂದಿದ್ದು. ಆದರೆ ಅಮೆರಿಕಾಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ ಅವರು ಎಷ್ಟೇ ನೋಟುಗಳನ್ನು ಮುದ್ರಿಸಿದರೂ, ವಿವಿಧ ದೇಶಗಳು ಡಾಲರ್ ಅನ್ನು ಸಂಗ್ರಹಿಸಿರುವುದರಿಂದ, ಹಣದುಬ್ಬರ ಒಂದು ಮಟ್ಟಿಗೆ ಹಿಡಿತದಲ್ಲಿರುತ್ತದೆ
ಸಾಲಗಾರ ದೇಶವಾದ, ಅಮೇರಿಕಾದಲ್ಲಿ ೨೦೦೮-೨೦೦೯ ಆರ್ಥಿಕ ಕುಸಿತವಾದಾಗ ಜನರಲ್ಲಿ, ಸರ್ಕಾರದಲ್ಲಿ ಇಬ್ಬರಲ್ಲೂ ಕಾಸಿಲ್ಲ.
ಹಾಗಾಗಿ ಅಮೆರಿಕ ದೇಶವು, ಯದ್ವಾ-ತದ್ವ ನೋಟುಗಳನ್ನು (ಸಾವಿರಾರು ಕೋಟಿ) ಪ್ರಿಂಟ್ ಮಾಡಿತು (ಸುಮಾರು ೭೦ ರ ದಶಕದಲ್ಲಿಯೇ ಅಮೆರಿಕಾವು, ತನ್ನ ಕರ್ರೆನ್ಸಿಗೆ ಇರುವ ಮೌಲ್ಯವನ್ನು ಅರಿತು, ತನ್ನಲ್ಲಿರುವ ಚಿನ್ನದ ಮೌಲ್ಯವನ್ನು ಮೀರಿ ನೋಟು ಮುದ್ರಿಸಿತು ). .ಜಗತ್ತಿನ ಎಲ್ಲ ದೇಶಗಳು ಡಾಲರ ಪಡೆಯಬೇಕಾದರೆ - ಕಷ್ಟ ಪಟ್ಟು ಸೇವೆ, ಸಂಪನ್ಮೂಲಗಳನ್ನು ರಫ್ತು ಮಾಡಬೇಕ. ಆದರೆ ಅಮೆರಿಕ ___ ಒರೆಸಿಕೊಳ್ಳುವ ಪೇಪರಿನ ಬದಲಿಗೆ, ಅದೇ ಕಾಗದದಲ್ಲಿ ನೋಟು ಮೊದ್ರಿಸಿದರಾಯಿತು - ಇಲ್ಲಿ ಅಮೆರಿಕಾವು ಜಗತ್ತಿನಲ್ಲಿ ಅತೀ ಹೆಚ್ಚು ಚಿನ್ನದ ಸಂಗ್ರಹ ಹೊಂದಿದ್ದರೂ, ಒಂದೇ ಒಂದು ಗ್ರಾಂ ಚಿನ್ನವನ್ನು ಒತ್ತೆ ಇಡಲಿಲ್ಲ. ತನ್ನ ಕರೆನ್ಸಿಗೆ ಇರುವ ಮೌಲ್ಯವನ್ನು ಸರಿಯಾದ ಸಮಯದಲ್ಲಿ ಚೆನ್ನಾಗಿ (ದೂರು) ಉಪಯೋಗಿಸಿಕೊಂಡಿತು. ಇದರಿಂದ ಡಾಲರ್ ಬೆಲೆ ಕಡಿಮೆಯಾಗಿ, ಅರಬ್ ದೇಶಗಳು ಪೆಟ್ರೋಲ್ ಬೆಲೆ ಏರಿಸಿದವು. (ಚೀನಾದ ಬೇಡಿಕೆ ಕೂಡ ಒಂದು ಕಾರಣ) .
ಜಗತ್ತಿನ ಜನರಿಗೆ ಹಾಗು ವಿವಿಧ ದೇಶಗಳಿಗೆ, ಡಾಲರ್ ನ ಸ್ಥಿರತೆಯ ಬಗ್ಗೆ ಸಂದೆಹವಾಗಿ ಎಲ್ಲರು ತಮ್ಮಲ್ಲಿರುವ ಡಾಲರ್ ಅನ್ನು ಚಿನ್ನದಲ್ಲಿ ಹೂಡಲು ಶುರುಮಾಡಿದರು. ಹಾಗಾಗಿಯೇ ಚಿನ್ನದ ಬೆಲೆಯೂ, ಅಮೆರಿಕಾದ ಆರ್ಥಿಕ ದುಸ್ಥಿತಿಯ ನಂತರ ಇಷ್ಟು ಹೆಚ್ಚಿರುವುದು.
ಇನ್ನು ಇರಕ್ ವಿಚಾರಕ್ಕೆ ಬಂದರೆ - ಸದ್ದಾಂ ಹುಸಇನ್ ೨೦೦೦ ಇಸಿವಿಯ, ತನ್ನು ದೇಶ ರಫ್ತು ಮಾಡುವ ತೈಲಕ್ಕೆ - ಯುರೋ ತೆಗೆದು ಕೊಳ್ಳಲು ಶುರು ಮಾಡಿದ. ಇದು ಯಶಸ್ವಿಯಾಗಿ ಮುಂದುವರಿದರೆ, ಬೇರೆ ದೇಶಗಳು ಅನುಸರಿಸಿದರೆ ಆಗಬಹುದಾದ ಅಪಾಯವನ್ನು ಮನಗೊಂಡ ಅಮೆರಿಕ, (ಅಣ್ವಸ್ತ್ರ ವಿದೆಯೆಂದು ಸುಳ್ಳು ಹೇಳಿ), ಆಕ್ರಮಣ ಮಾಡಿದರು. ಒಂದೇ ಒಂದು ಸ್ಕೂಟರ್ ಮಾಡಲು ಸಹ ತಾಕತ್ತಿಲ್ಲದ ಇರಕ್, ಅಣ್ವಸ್ತ್ರ ತಯಾರಿಸುವುದೇ ?
ಇಷ್ಟೇ ಅಲ್ಲ, ಅಮೆರಿಕಾವು ಡಾಲರ್ ಉಪಯೋಗಿಸಿ, ಜನರ ಆರೋಗ್ಯದೊಂದಿಗೂ ಚೆಲ್ಲಾಟವಾಡುತ್ತಿದೆ. ಎಲ್ಲರಿಗೋ ಗೊತ್ತಿರುವಂತೆ ಆಫ್ರಿಕಾದಲ್ಲಿ AIDS ಮಾರಿ ಭಯಂಕರವಾಗಿದೆ. ಅಮೆರಿಕಾದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ನಡೆಯುವ AIDS ಔಶಧಿಗಳನ್ನು ಪರೀಕ್ಷಿಸಲು, ಹಲವಾರು ವರ್ಷಗಳ ನಂತರದ ಅದರ ಪರಿಣಾಮಗಳನ್ನು ತಿಳಿಯಲು, ಆಫ್ರಿಕಾದ ಜನರು ಈಗ ಲ್ಯಾಬ್ನ ಇಲಿಗಳಗಿದ್ದರೆ. ಅಮೆರಿಕ ಸರ್ಕಾರವು, ಹಣವನ್ನು ಸಹಾಯ ಅಂತ ಸುಳ್ಳು ಹೇಳಿ - ಕೋಟ್ಯಂತರ ಡಾಲರ್ಗಳನ್ನು ಆಫ್ರಿಕಾದ ದೇಶಗಳಿಗೆ ಕೊಡುತ್ತದೆ. ನಿಯಮದ ಪ್ರಕಾರ, ಆ ದೇಶಗಳು ಆ ಹಣವನ್ನು ಉಪಯೋಗಿಸಿ ಔಷಧಗಳನ್ನು ಅಮೇರಿಕಾದ ಕಂಪನಿಗಲಿಂದಲೇ ಪಡೆಯಬೇಕು. ಹೀಗೆ ಆಫ್ರಿಕಾವನ್ನು ತಮ್ಮ ಪ್ರಯೋಗಾಲಯ ಮಾಡಿಕೊಂಡಿದ್ದಾರೆ.
ಇಲ್ಲಿ ಅರಬರು, ಪೆಟ್ರೋ ಡಾಲರ್ ನ , ಕರೆನ್ಸಿ ಬದಲಿಸುವುದು ಸುಲಭವಲ್ಲ . ಅವರಿಗಾಗಲೇ ೩೦-೪೦ ವರ್ಷಗಳಿಂದ ಸಹಸ್ರಾರು ಕೋಟಿ ಡಾಲರ್ಗಳನ್ನು ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಅದರಲ್ಲಿ ಬಹುಪಾಲು ಹಣವನ್ನು - ಅಮೆರಿಕ ದಲ್ಲೇ ಹೂಡಿದ್ದಾರೆ. ಈಗೆನಾದರು ಅವರು ಕರೆನ್ಸಿ ಬದಲಾಯಿಸಿದರೆ, ಅವರ ಹಣವೆಲ್ಲೇ ಅರಬ್ಬೀ ಸಮುದ್ರದಲ್ಲಿ ಮುಳುಗಿದಂತೆ.
ಇದರಿಂದ ಅಮೆರಿಕಾಗೆ ಕೂಡ ಬಹಳ ನಷ್ಟವಾಗಿದೆ - ಅಲ್ಲಿ ಬಟ್ಟೆ, ತೂಥ್ ಬ್ರುಶ್, ಗಡಿಯಾರ ಇಂತಹ ವಸ್ತುಗಳು ತಯರಾಗುವುದೇ ಇಲ್ಲ. ಎಲ್ಲವು ಅಮದಗುತ್ತದೆ (ಐಫೋನ್ ಕೂಡ :) ). ತಂತ್ರಜ್ಞಾನ ಕೆಲಸವೆಲ್ಲವೂ ಬೇರೆ ದೇಶಕ್ಕೆ ಹೋಗುತ್ತಿವೆ. ಎಲ್ಲವು ಸುಲಭವಾಗಿ ದೊರೆಯುವುದರಿಂದ, ಜನರು ಕಷ್ಟಪಡುವುದಿಲ್ಲ (ಓದುವುದಿಲ್ಲ ಕೂಡ). ಹೀಗಾಗಿ ಅಲ್ಲಿ ಜನರ ಕಾರ್ಯದಕ್ಷತೆಯು ಕುಸಿಯುತ್ತಿದೆ.ಇದು ಅವರ ದೇಶಕ್ಕೆ ಒಂದು ದೊಡ್ಡ ಶಾಪ.
ಇಷ್ಟು ನೋಡಿ - ಪೆಟ್ರೋ ಡಾಲರ್ ನ ಪುರಾಣ ... ಈ ನಡುವೆ, ಜನರು ಯುರೋ ವನ್ನು ಸ್ವಲ್ಪ ನೆಚ್ಚುತ್ತಿದ್ದರೆ. ಮುಂದೆ ನೋಡೋಣ ಏನಾಗಬಹುದು.
ಪೆಟ್ರೋ ಡಾಲರ್ ಇನ್ನೊಂದು ಪರಿಣಾಮವೆಂದರೆ: ಭಯೋತ್ಪಾದನೆ.
ReplyDeleteಪೆಟ್ರೋಲ್ಗೆ ಸಕತ್ತಾಗಿ ದುಡ್ಡು ಪಡೆಯುವ ಇವರುಗಳು : ಸ್ವಲ್ಪ ಭಾಗವನ್ನು ಇಸ್ಲಾಂ ಹರಡುವುದಕ್ಕೂ ಕಳುಹಿಸುತ್ತಾರೆ. ಬಿನ್ ಲಾಡೆನ್ ಇದೆ ಪೆಟ್ರೊ ಡಾಲರ್ ನ ಕೂಸು.
ಈ ಅರಬ್ ದೇಶಗಳಲ್ಲಿ ಆರ್ಥಿಕತೆ ಇರುವುದೇ ಪೆಟ್ರೋಲ್ ನ ಮೇಲೆ. ಇದರಲ್ಲಿ ಸ್ವಲ್ಪ ದುಡ್ಡು ದುಡಿಯಲು ಸಾಕಷ್ಟು ಪಾಕಿಸ್ತಾನಿಗಳು, ಭಾರತೀಯರು, ಬಾಂಗ್ಲಾದೇಶಿಗಳು ಹೋಗುತ್ತಾರೆ . ಅವರು ತರುವ ದುಡ್ಡು ಬಹುಶಃ ನಮ್ಮ ದೇಶದ, ಪಾಕಿಸ್ತಾನದ ಬಹಳಸ್ತು ಮಸಿದಿಗಳಿಗೆ ಹೋಗಬಹುದು. ಇದರಿಂದ ಆಗುವ ಕಷ್ಟವೆನೆಂದರೆ - ಶಾಲೆಗೆ ಹೋಗಬೇಕಾದ ಬಹಳಷ್ಟು ಹುಡುಗರು - ಇಲ್ಲಿ ಕಲಿತು ತೀವ್ರಗಾಮಿಗಲಗುತ್ತಾರೆ.
ಇಸ್ಲಾಮಿಕ್ ದೇಶಗಳು ಈ ಹಣವನ್ನೇ ಉಪಯೋಗಿಸಿ: ಇಸ್ಲಾಂ ಹರಡಲು, ಮಸೀದಿ ಕಟ್ಟಲು ವಿಶ್ದಾದ್ಯಂತ ಬಳಸುತ್ತಾರೆ.
ಈ ಪೆಟ್ರೊ ಡಾಲರ್ ನ ಆರ್ಥಿಕತೆ ಬದಲಾದರೆ - ವಿಶ್ವದ ಆರ್ಥಿಕ, ಸಾಮಾಜಿಕ ಹಾಗೋ ಧಾರ್ಮಿಕ ಪರಿಸ್ಥಿತಿಯೇ ಬದಲಾಗಬಹುದು :-)