Saturday, September 10, 2011

ಧರ್ಮ, ನಾಸ್ತಿಕತೆ ಹಾಗೂ ಮನುಷ್ಯ

ಗೆಳೆಯರೇ,

ನೀವು ಮೇಲಿನ ಎರಡು ಪದಗಳನ್ನೂ, ಅದರ ಬಗ್ಗೆ ಹಲವಾರು ಚರ್ಚೆಗಳನ್ನು ಕೇಳಿರಬಹುದು.
ಇಲ್ಲಿ ನಾನು ಯಾವುದು ಸರಿ, ಯಾವುದು ತಪ್ಪು ಎಂಬ ವಾದವಿರುವುದಿಲ್ಲ;  ವಿಭಿನ್ನ ರೀತಿಯ ಚರ್ಚೆ.

ನನ್ನ ಅಭಿಪ್ರಾಯ: ಮನುಷ್ಯ ಅವನ "logic" ಅನುಸರಿಸಿ, ಸುಖವನ್ನು ಹುಡುಕಿಕೊಂಡು ಹೋಗುತ್ತಾನೆ.  ನಿಜ ಇಷ್ಟೇ  !!!

ಆಸ್ತಿಕತೆ ಬೇರೆ ಅಲ್ಲ, ನಾಸ್ತಿಕತೆ ಬೇರೆ ಅಲ್ಲ ; ವೈಜ್ಞಾನಿಕತೆ ಬೇರೆ ಅಲ್ಲ, ಧಾರ್ಮಿಕತೆ ಬೇರೆ ಅಲ್ಲ . ಇವೆಲ್ಲ ಸತ್ಯವನ್ನು ಹುಡುಕುವ ಬೇರೆ ಬೇರೆ ದಾರಿಗಳು. ಆ ಸತ್ಯ - ಮನುಷ್ಯನ ಉನ್ನತಿ.

ನೀವು ಯಾವುದೇ ಧಾರ್ಮಿಕ ಚಾನಲ್ ಗಳನ್ನು ನೋಡಿ - ಸಮಾಜದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಇರಿ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿ,  ಒಟ್ಟಾಗಿ ಪ್ರಾರ್ಥನೆ (ಅಥವಾ ಸತ್ಸಂಗ) ಮಾಡಿ ಎನ್ನುತ್ತಾರೆ. (ಮೇಲಿನ ಎಲ್ಲದ್ದನ್ನು - ದೇವರು ಹೇಳಿದ್ದಾನೆ, ಬಯಸುತ್ತಾನೆ ಎನ್ನುತ್ತಾರೆ)

ಮನುಷ್ಯನು ಜೀವನದಲ್ಲಿ / ಕೆಲಸದಲ್ಲಿ ಮುಂದೆ ಬರಬೇಕಾದರೆ - ಜನರ ಸಂಪರ್ಕವಿರಬೇಕು.  ಆದಿಲ್ಲದೆ ಏನು ಸಾಧ್ಯವಿಲ್ಲ . ಹೊಸ ಕಂಪನಿ ತೆರೆಯಬೇಕಾದರೆ, ಒಂದು ಕಾರ್ಯಕ್ರಮ ಆಯೋಜಿಸಬೇಕಾದರೆ ಎಲ್ಲಕ್ಕೂ ಜನ ಬೇಕು. ರಾಜಕಾರಣಿಗಳನ್ನು ಕೇಳಿ; ಇದನ್ನು ಸರಿಯಾಗಿ ವಿವರಿಸುತ್ತಾರೆ.

ಇನ್ನೂ ಒಟ್ಟಿಗೆ ಕಡ್ಡಾಯ ಪ್ರಾರ್ಥನೆಯ ಮಾಡುವುದರ ಫಲ ಏನಪ್ಪಾ ? - ಅಲ್ಲಿ ಎಷ್ಟು ಜನರಿಗೆ ದೇವರು ಒಲಿದು ಮೋಕ್ಷ ಸಿಗುತ್ತದೋ ಗೊತ್ತಿಲ್ಲಾ, ಎಷ್ಟು ಜನರ ಆಸೆ ಈಡೇರುತ್ತೋ ತಿಳಿದಿಲ್ಲ; ಆದರೆ ಎಲ್ಲ ಜನರು ಅಲ್ಲಿ ಸೇರುವುದರಿಂದ ಅಲ್ಲಿ ಸಮಾಜ ಒಗಟ್ಟಗುತ್ತದೆ. ಇದರಿಂದ ಆ ಸಮಾಜದ ಎಲ್ಲರೂ ಅನುಕೂಲವಾಗುತ್ತದೆ, ಒಗ್ಗಟ್ಟಿನಿಂದ ಪ್ರತಿಕೂಲ ಸನ್ನಿವೇಶದಲ್ಲೂ ಬದುಕೂವ, ಬೆಳೆಯುವ ತಾಕತ್ತು ಬರುತ್ತದೆ  - ಕಡ್ಡಾಯ ಭಾನುವಾರದ ಚರ್ಚ್ ಮತ್ತು ಶುಕ್ರವಾರದ ನಾಮಜ್ ನಿಂದಾದ ಉಪಯೋಗ ಅವು ಜಗತ್ತಿನಲ್ಲೆಡೆ ಹರಡಿದೆ. ನಮ್ಮ ದೇಶದ ಜೈನರು/ಮಾರ್ವಾಡಿಗಳು ಕೂಡ (ಬೆಂಗಳೂರಿನಲ್ಲೇ )ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ತಮ್ಮವರಿಗೆ ವ್ಯಾಪಾರ/ಉದ್ದಿಮೆ ಮಾಡುಲು ಪರಸ್ಪರ ಸಹಾಯ ಮಾಡುತ್ತಾರೆ ( ಇವತ್ತು SP ರೋಡ್ ನಲ್ಲಿ ಅವರ ವ್ಯಾಪಾರವನ್ನು ನೋಡಿ, ಒಂದು sample ತಿಳಿಯುತ್ತದೆ.)

ಒಮ್ಮೆ GOD ಚಾನಲ್ ನೋಡುತ್ತಾ ಇದ್ದೇ. ಅದರಲ್ಲಿ ಕುಡಿತವನ್ನು ಬಿಡಿ, ಡ್ರಗ್ಸ್ ಬಿಡಿ, ಸಿಗರೇಟು ಬಿಡಿ, ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಅಂತ ಲೆಕ್ಚರ್ ಕೊಡುತ್ತಾ ಇದ್ದ . ದೇವರ ಪ್ರೀತಿ ಬಗ್ಗೆ ನನಗೆ ಗೊತ್ತಿಲ್ಲ- ಆದರೆ ಆ ಕೆಟ್ಟ ಚಾಟಗಳನ್ನು ಬಿಟ್ಟರೆ ಅವರಿಗೆ ಒಳ್ಳೆಯದಲ್ಲವೇ (ಆರೋಗ್ಯಕ್ಕೆ ಹಾಗೂ ಜೇಬಿಗೆ ;-))

ಇನ್ನೂ ದಾನ/ ಬೇರೆಯವರಿಗೆ ಸಹಾಯ ಮಾಡಿ ಎನ್ನುತ್ತಾರೆ.  ನಿಮ್ಮಾನ್ನು ದೇವರು ಮೆಚ್ಚುತ್ತಾನೆ ಅಂತ ಆಸ್ತಿಕರು ಹೇಳುತ್ತಾರೆ. ಆದರೆ ಈ ನಡುವಳಿಕೆಗೆ ಕಾರಣವನ್ನು ವಿಜ್ಞಾನಿಗಳು ಹೀಗೆ ವಿವರಿಸುತ್ತಾರೆ: ನೀವು ಒಂದು ನಾಯಿಯನ್ನು ಪ್ರೀತಿಯಿಂದ ನಾಲ್ಕು ತುತ್ತು ಹಾಕಿದರೆ, ಅದು ನಿಮ್ಮನ್ನು ನೋಡಿಕೊಳ್ಳುವಿದಿಲ್ಲವೇ? (ಹಕ್ಕಿ ಎಮ್ಮೆಯ ತಲೆಯಿಂದ, ಹುಳ ತಿನ್ನುವುದರಿಂದ ಇಬ್ಬರಿಗೂ ಲಾಭವಿದೆ) ಹಾಗೆಯೇ ನಿಮಾಗೂ ಮುಂದೊಂದು ದಿನ ಸಹಾಯ  ಬೇಕಾದ ಸಮಯದಲ್ಲಿ ಸಿಗಬಹುದು.

ನೀವು ಯಾವುದೇ ಸ್ವಾಮೀಜಿಯ ಭಾಷಣವನ್ನೊ? ಧಾರ್ಮಿಕ ಲೇಖನವನ್ನೊ ನೋಡಿ - "ವಸುಧೈವ ಕುಟುಂಬಕಮ್" . ಎಲ್ಲರಲ್ಲೂ ಒಂದೇ ದೇವರ ಅಂಶವಿದೆ ಎನ್ನುತ್ತಾರೆ.  ನೀವು ಒಬ್ಬ "biologist"ನ ವಿಚಾರಿಸಿ ಅವನು ಹೇಳುತ್ತಾನೆ: ಪ್ರತಿಯೊಂದು ಜೀವಿಯಲ್ಲಿರುವುದು (ಮೀನು, ಪಕ್ಷಿಗಳು, ಪ್ರಾಣಿಗಳು) ಒಂದೇ ಮೂಲ ತತ್ವ - ಅದೇ "DNA", "RNA".
"RNA" ಕಂಡುಹಿಡಿದ ಹೇಳಿದ ನಂತರ ವಿಜ್ಞಾನಿ ಹೇಳಿದ್ದು ಇಷ್ಟೇ  - 'ನನ್ನ ಸಂಶೋಧನೆಯ ನಂತರ ಹೊರಗೆ ಬಂದೆ - ಪ್ರತಿಯೊಂದು ಜೀವಿ ಗುಬ್ಬಿ, ಮರ ಎಲ್ಲರಲ್ಲೂ ಒಂದೇ  ಅಂಶವನ್ನು ಕಾಣುತ್ತಿರುವೆ' ;-)

ಯಾವುದೇ ಧಾರ್ಮಿಕ ಗುರುಗಳು ಹೇಳುವ ಉಪದೇಶವನ್ನು ಕೇಳಿ - ಆ ಎಲ್ಲ ಉಪ್ದೇಶಗಳನ್ನು ಆದ್ಯತ್ಮಿಕತೆ ಇಲ್ಲದ ಹಾಗೆ ಜನರಿಗೆ ತಿಳಿಯುವ ಹಾಗೆ ಹೇಳಬಹುದು.  ಅತ್ಯಂತ ಪ್ರಸಿದ್ದವಿರುವ "DALE CARNIGE" ಅವರ "How to win friends and influence people" ಓದಿ. ಅಲ್ಲಿ ಧಾರ್ಮಿಕ ಪ್ರವಚನಗಳಲ್ಲಿ ಇರುವುದನ್ನೇ ಬಟ್ಟಿ ಇಳಿಸಿ, ಆಧ್ಯಾತ್ಮಿಕತೆ ತೆಗೆದು ಹೇಳಿದ್ದಾನೆ.

ಹೆಚ್ಚು ಕೊರೆಯಲಿಕ್ಕೆ ಹೋಗುವುದಿಲ್ಲ - ನಾನು ಶ್ರೀ ಶ್ರೀ ರವಿಶಂಕರ್ ಹಾಗೋ "Richard Dawkins" ಅವರ ವೀಡಿಯೋಗಳನ್ನು ನೋಡಿದ್ದೇನೆ. ಅದರ ಸಾರ ಇಷ್ಟೇ (ನನ್ನದೊಂದು ಹಳೆಯ ಪೋಸ್ಟ್ )

When Richard Dawkins talks, you notice that he emphasizes "importance and joy" of living in present moment and exploring the mystery of world. (also stressing dont think about god)

If you listen to Sri Sri Ravishankar, he too emphasizes importance and joy of being in present moment. (also stressing love of god)

Saturday, September 3, 2011

ಹಂಪೆಯಲ್ಲಿ ನಾನು ಕಲಿತ ಪಾಠ, ನನ್ನ ಆಲೋಚನೆಗಳು

ನಾನು ಹಂಪೆಯಿಂದ ಹಿಂತಿರುಗಿದರು, ಇನ್ನೂ ನನ್ನ ತಲೆಯಿಂದ ಹೋಗಿಲ್ಲ.  ನಮ್ಮ ಮನೆಯ ಸಮೀಪವಿರುವ ಹನುಮಂತನ ದೇವಸ್ಥಾನದ ಸುತ್ತಲೂ ಹಂಪೆಯ ವಿವಿಧ ಸ್ಮಾರಕಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಅದರಲ್ಲಿರುವ ಹಲವಾರು ಚಿತ್ರಗಳನ್ನು ನಾನು ಗುರುತಿಸಬಲ್ಲೆ. ಪತ್ರಿಕೆಯಲ್ಲೂ ಹಲವಾರು ಬಾರಿ ಹಂಪೆಯ ಬಗ್ಗೆ ಓದಿದ್ದೆ .

ಕಮಲಪುರದಲ್ಲಿ ನಾನು ಒಂದು ದೊಡ್ಡ ಬಂಗಲೆಯನ್ನು (ರಾಜಪುತ ಕೋಟೆ ಎಂಬ ಹೆಸರು) ನೋಡಿದ್ದೆ .  ಹಿಂತಿರುಗಿ ಬಂದ ಮೇಲೆ ಪತ್ರಿಕೆಯಲ್ಲಿ ಅದರ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು . MLA ಆನಂದ್ ಸಿಂಗ್ ಅವರ ತಮ್ಮ (ಅಥವಾ ಮೈದುನ ), ಅದನ್ನು ಕಟ್ಟಿಸಿದ್ದಂತೆ ....  ಹಂಪೆಗೆ ವಿಶ್ವ ಪರಂಪರೆ ಪಟ್ಟಿ ಕೊಡಬೇಕಾದರೆ - ಅಲ್ಲಿನ ಕಟ್ಟಡಗಳ, ಹಂಪೆಯ ಪರಿಸರದ ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನಿಯಮವಿದೆ.  ಅದನ್ನು ಉಲ್ಲಂಘಿಸಿ ಮಹಲನ್ನು ಕಟ್ಟಿದ್ದಾರೆ.  (ಎಲ್ಲಿಂದಲೋ ಮುಸ್ಲಮನರಿಗೆ ಹೆದರಿಕೊಂಡು ಓಡಿ ಬಂದವರಿಗೆ, ಈ ನಾಡಿನ ಪರಂಪರೆಯ ಮಹತ್ವ ಹೇಗೆ ತಿಳಿಯಬೇಕು ಎಂದುಕೊಂಡೆ ?  ಯೋಚನೇ ಮಾಡಿದಾಗ ಯಾವನೋ ಒಬ್ಬ ಮಾಡಿದ ತಪ್ಪಿಗೆ ಕರ್ನಾಟಕದಲ್ಲಿರುವ ಎಲ್ಲ ರಾಜಪುತರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಅನ್ನಿಸಿತು)

ಹಂಪೆಗೆ ರೈಲಿನಲ್ಲಿ ಹೋಗುವಾಗ ದಾರಿಯಲ್ಲಿ  ಬೆಳಗ್ಗೆ ಆದ ಕೂಡಲೇ ಅದಿರಿನ ಕಾರ್ಖಾನೆಗಳು ಉಗುಳುತ್ತಿರುವ ಹೊಗೆ ನಿಮ್ಮನ್ನು ಸ್ವಾಗತಿಸುತ್ತವೆ. ಹಂಪೆಯಲ್ಲಿ ಹತ್ತಿರ ಹೆದ್ದಾರಿಗಳಲ್ಲಿ ಓಡಾಡಿದರೆ - ಅದಿರಿನ ಕೆಂಪಗಿನ ದೂಳು ನಿಮ್ಮನ್ನು ಅವರಿಸುತ್ತದೆ. ಇಷ್ಟು ಲೂಟಿ ಮಾಡುತ್ತಿರುವುದು ಆನಂದ್ ಸಿಂಗ್ ಅವರಿಗೆ ಸಾಕಾಗಲಿಲ್ಲ ಎನಿಸುತ್ತದೆ.  ಮೊನ್ನೆ ಪತ್ರಿಕೆಯಲ್ಲಿ ಅವರು ಹಂಪೆಯ ಸುತ್ತುಮುತ್ತಲು ಕಲ್ಲಿನ ಗಣಿಗಾರಿಕೆಗೆ ಅನುಮತಿ ಬೇಕೆಂದು - ಹೋರಾಟ ಮಾಡುವುದಾಗಿ ಬಂದಿತ್ತು .

ಈ ಸಿಂಗ್ ಕುಟುಂಬವನ್ನು ಎತ್ತಂಗಡಿ ಮಾಡದಿದ್ದರೆ, ಹಂಪೆಯ ಸ್ಮಾರಕಗಳಿಗೆ ಉಳಿಗಾಲವಿಲ್ಲ ಎನಿಸುತ್ತದೆ.

ಹಂಪೆಯಲ್ಲಿ ನಾನು ಓಡಾಡುವಾಗ, ವಿರೂಪಾಕ್ಷ ದೇವಾಲಯದ ಮುಂದಿರುವ ರಾಜ ಬಿದಿಯ ಎರಡು ಕಡೆಗಳಲ್ಲಿ ಬಹಳ ಹಳೆಯದಾದ ಕಲ್ಲಿನ ಮಂಟಪಗಳಿವೆ. ಅದರಲ್ಲಿ ಕೆಲವು ಅಂಗಡಿಗಳಿದ್ದರೆ, ಇನ್ನೂ ಕೆಲವು ಮನೆಗಳನ್ನು ಮಾಡಿಕೊಂಡಿದ್ದಾರೆ.
ಕೆಲವು ವಾರಗಳ ಹಿಂದೆ ಅವೆಲ್ಲವನ್ನು ಎತ್ತಂಗಡಿ ಮಾಡಿಸಿದಾಗ, ಅಲ್ಲಿ ಕೆಲವು ಪುರಾತನ ವಸ್ತುಗಳು ಸಿಕ್ಕಿದ್ದನ್ನು ಓದಿ ಖುಷಿಯಾಯಿತು.


ಹಂಪೆಯ ಪ್ರವಾಸ ಮಾಡುವಾಗ ಹಲವಾರು ಯೋಚನೆಗಳು ತಲೆಗೆ ಬಂದವು.  ಮೊದಮೊದಲು ಹಂಪೆಯ ದುಸ್ಥಿತಿಯನ್ನು ನೋಡಿ ಬಹಳ ಬೇಸರವಾಯಿತು. ಕೃಷ್ಣದೇವರಾಯನ ದೊಡ್ಡಸ್ತಿಕೆಯನ್ನು ನೋಡಿ ಚೆನ್ನಾಗಿ ಅವನ್ನು ಬೈದುಕೊಂಡೆ. ಅವನು ಎಲ್ಲ ಬಹಮನಿ ರಾಜ್ಯಗಳನ್ನು ಗೆದ್ದಿದ್ದರು ಸಹ, ಅವಗಳನ್ನು ಅವನಿಗೆ ಹಿಂತಿರುಗಿಸಿ "ಯವನ ರಾಜ್ಯ ಸಂಸ್ಥಾಪಕ" ಎಂಬ ಬಿರುದನ್ನು ಪಡೆದುಕೊಂಡಿದ್ದ. ಅಲ್ಲಿ ವಜ್ರಗಳನ್ನು ಸೇರಿನಲ್ಲಿ ಮಾರುತ್ತಿದ್ದರು ಎಂದ ರಸ್ತೆಯನ್ನು ನೋಡಿದೆವು ... ಇಡೀ ನಗರದಲ್ಲಿ ಕಾಣುವ ಅದ್ಭುತವಾದ ಕಲ್ಲಿನ ಕೆತ್ತನೆಗಳು, ಕಟ್ಟಡಗಳು ನೋಡಿದೆವು  .  ಹಂಪೆಯಲ್ಲಿ ನೀವು ಎಲ್ಲೆ ನೋಡಿದರೂ ಹಾಳಾದ ದೇವಾಲಯವು ಕಾಣುತ್ತದೆ.

ನೀವು ಹಂಪೆಯನ್ನು ನೋಡಿದ ಯಾರನ್ನಾದರೂ ಕೇಳಿ, ಅದರ ಗತ ವೈಭವನ್ನು ನೆನೆಸಿಕೊಂಡು ಬೇಸರಪಡುತ್ತಾರೆ.  ನನಗೆ ಅನ್ನಿಸಿದ್ದು - ನಾವು ಇನ್ನೂ ಎಷ್ಟು ದಿವಸ ಗತ ವೈಭವವನ್ನು ನೆನೆಸಿಕೊಂಡು ಕೊರಗುವುದು ? ಕೊರಗಿದಷ್ಟೂ "ಡಿಪ್ರೆಷನ್" ಗೆ ಜಾರುತ್ತೇವೆ ಹೊರತು, ಉದ್ದರವಾಗುವುದಿಲ್ಲ. ಮತ್ತೆ ಅಂತಹ ರಾಷ್ಟ್ರ ಕಟ್ಟಲು ಕನ್ನಡಿಗರಿಗೆ ಸದ್ಯವಿಲ್ಲವೇ ? ಸಾಮರ್ಥ್ಯವಿಲ್ಲವೇ?  ಇಲ್ಲ ಖಂಡಿತ ಅದು ಸಾದ್ಯವಿದೆ. ಸಾಮರ್ಥ್ಯವಿದೆ . ಭಾರತದಲ್ಲಷ್ಟೆ ಅಲ್ಲ ವಿದೇಶದಲ್ಲೂ ಕನ್ನಡಿಗರೂ ಹೆಸರು ಮಾಡಿದ್ದರೆ, ಆದರೆ ಇಂದು ಕೊರತೆಯಿರುವುದು ಅವರಲ್ಲಿ ಕನ್ನಡದ ಅಭಿಮಾನ :(.

ಹಂಪೆ ದ್ವಾಪರದಲ್ಲಿ ಸಾಕ್ಷಾತ್ ಹನುಮನಿದ್ದ ಸ್ಥಳ. ಅವನು ಶಕ್ತಿಯ ಪ್ರತೀಕ. ಹಂಪೆಯಲ್ಲಿ ಎಲ್ಲೆಲ್ಲಿ ನೋಡಿದರೂ ನಿಮಗೆ ಅದ್ಭುತ ದೇವಲಯಗಳು ಕಾಣುತ್ತವೆ. ಆದರೆ ಮುಸ್ಸಲ್ಮಾನ ಸೈನ್ಯ ಬರುವಾಗ ಎಲ್ಲ ದೇವರು, ದೇವಾಲಯಗಳನ್ನು ಬಿಟ್ಟು (ಸಂಪತ್ತನ್ನು ಮಾತ್ರ ತೆಗೆಕೊಂಡು) ತಿರುಮಲರಾಯ ಓಡಿಹೋದ. ಜನರೂ ಓಡಿ ಹೋದರೂ.  ಅಷ್ಟು ಪೂಜೆ ಮಾಡಿದರೂ, ಹಂಪೆಯ ರಕ್ಷಣೆ ಆಗಲಿಲ್ಲ. ಒಂದಂತು ನನಗೆ ಸ್ಪಷ್ಟವಾಯಿತು. ನಿಜವಾದ ಶಕ್ತಿಯಿರುವುದು ಮನುಷ್ಯನ ಸಾಮರ್ಥ್ಯದಲ್ಲಿ, ಪ್ರಯತ್ನದಲ್ಲಿ - ದೇವರಲ್ಲಿ, ವಿಗ್ರಹಗಳಲ್ಲಿ ಅಲ್ಲ.  ದೈವ ಶಕ್ತಿಯಿದ್ದರೂ ಸಹ ಅದು ಮನುಷ್ಯ ಪ್ರಯತ್ನದಲ್ಲಿ ವ್ಯಕ್ತವಾಗಬೇಕು ಹಾಗೂ ವ್ಯಕ್ತವಾಗುತ್ತದೆ ಕೂಡ. ಹರಕೆಯಿಂದ, ಬೇಡುವುದರಿಂದ,  ಸುತ್ತುವುದರಿಂದ, ಶಾಸ್ತ್ರ ಕೇಳುವುದರಿಂದ , ಭವಿಷ್ಯ ನೋಡುವುದರಿಂದ, ಹೆಸರು ಬದಲಾಯಿಸುವುದರಿಂದ  ಏನೂ ಸದ್ಯವಿಲ್ಲ.

ಇಲ್ಲಿಗೆ ನನ್ನ ಹಂಪೆಯ ಪುರಾಣ ಮುಕ್ತಾಯ  :)