ನಾನು ಹಂಪೆಯಿಂದ ಹಿಂತಿರುಗಿದರು, ಇನ್ನೂ ನನ್ನ ತಲೆಯಿಂದ ಹೋಗಿಲ್ಲ. ನಮ್ಮ ಮನೆಯ ಸಮೀಪವಿರುವ ಹನುಮಂತನ ದೇವಸ್ಥಾನದ ಸುತ್ತಲೂ ಹಂಪೆಯ ವಿವಿಧ ಸ್ಮಾರಕಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಅದರಲ್ಲಿರುವ ಹಲವಾರು ಚಿತ್ರಗಳನ್ನು ನಾನು ಗುರುತಿಸಬಲ್ಲೆ. ಪತ್ರಿಕೆಯಲ್ಲೂ ಹಲವಾರು ಬಾರಿ ಹಂಪೆಯ ಬಗ್ಗೆ ಓದಿದ್ದೆ .
ಕಮಲಪುರದಲ್ಲಿ ನಾನು ಒಂದು ದೊಡ್ಡ ಬಂಗಲೆಯನ್ನು (ರಾಜಪುತ ಕೋಟೆ ಎಂಬ ಹೆಸರು) ನೋಡಿದ್ದೆ . ಹಿಂತಿರುಗಿ ಬಂದ ಮೇಲೆ ಪತ್ರಿಕೆಯಲ್ಲಿ ಅದರ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು . MLA ಆನಂದ್ ಸಿಂಗ್ ಅವರ ತಮ್ಮ (ಅಥವಾ ಮೈದುನ ), ಅದನ್ನು ಕಟ್ಟಿಸಿದ್ದಂತೆ .... ಹಂಪೆಗೆ ವಿಶ್ವ ಪರಂಪರೆ ಪಟ್ಟಿ ಕೊಡಬೇಕಾದರೆ - ಅಲ್ಲಿನ ಕಟ್ಟಡಗಳ, ಹಂಪೆಯ ಪರಿಸರದ ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನಿಯಮವಿದೆ. ಅದನ್ನು ಉಲ್ಲಂಘಿಸಿ ಮಹಲನ್ನು ಕಟ್ಟಿದ್ದಾರೆ. (ಎಲ್ಲಿಂದಲೋ ಮುಸ್ಲಮನರಿಗೆ ಹೆದರಿಕೊಂಡು ಓಡಿ ಬಂದವರಿಗೆ, ಈ ನಾಡಿನ ಪರಂಪರೆಯ ಮಹತ್ವ ಹೇಗೆ ತಿಳಿಯಬೇಕು ಎಂದುಕೊಂಡೆ ? ಯೋಚನೇ ಮಾಡಿದಾಗ ಯಾವನೋ ಒಬ್ಬ ಮಾಡಿದ ತಪ್ಪಿಗೆ ಕರ್ನಾಟಕದಲ್ಲಿರುವ ಎಲ್ಲ ರಾಜಪುತರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಅನ್ನಿಸಿತು)
ಹಂಪೆಗೆ ರೈಲಿನಲ್ಲಿ ಹೋಗುವಾಗ ದಾರಿಯಲ್ಲಿ ಬೆಳಗ್ಗೆ ಆದ ಕೂಡಲೇ ಅದಿರಿನ ಕಾರ್ಖಾನೆಗಳು ಉಗುಳುತ್ತಿರುವ ಹೊಗೆ ನಿಮ್ಮನ್ನು ಸ್ವಾಗತಿಸುತ್ತವೆ. ಹಂಪೆಯಲ್ಲಿ ಹತ್ತಿರ ಹೆದ್ದಾರಿಗಳಲ್ಲಿ ಓಡಾಡಿದರೆ - ಅದಿರಿನ ಕೆಂಪಗಿನ ದೂಳು ನಿಮ್ಮನ್ನು ಅವರಿಸುತ್ತದೆ. ಇಷ್ಟು ಲೂಟಿ ಮಾಡುತ್ತಿರುವುದು ಆನಂದ್ ಸಿಂಗ್ ಅವರಿಗೆ ಸಾಕಾಗಲಿಲ್ಲ ಎನಿಸುತ್ತದೆ. ಮೊನ್ನೆ ಪತ್ರಿಕೆಯಲ್ಲಿ ಅವರು ಹಂಪೆಯ ಸುತ್ತುಮುತ್ತಲು ಕಲ್ಲಿನ ಗಣಿಗಾರಿಕೆಗೆ ಅನುಮತಿ ಬೇಕೆಂದು - ಹೋರಾಟ ಮಾಡುವುದಾಗಿ ಬಂದಿತ್ತು .
ಈ ಸಿಂಗ್ ಕುಟುಂಬವನ್ನು ಎತ್ತಂಗಡಿ ಮಾಡದಿದ್ದರೆ, ಹಂಪೆಯ ಸ್ಮಾರಕಗಳಿಗೆ ಉಳಿಗಾಲವಿಲ್ಲ ಎನಿಸುತ್ತದೆ.
ಹಂಪೆಯಲ್ಲಿ ನಾನು ಓಡಾಡುವಾಗ, ವಿರೂಪಾಕ್ಷ ದೇವಾಲಯದ ಮುಂದಿರುವ ರಾಜ ಬಿದಿಯ ಎರಡು ಕಡೆಗಳಲ್ಲಿ ಬಹಳ ಹಳೆಯದಾದ ಕಲ್ಲಿನ ಮಂಟಪಗಳಿವೆ. ಅದರಲ್ಲಿ ಕೆಲವು ಅಂಗಡಿಗಳಿದ್ದರೆ, ಇನ್ನೂ ಕೆಲವು ಮನೆಗಳನ್ನು ಮಾಡಿಕೊಂಡಿದ್ದಾರೆ.
ಕೆಲವು ವಾರಗಳ ಹಿಂದೆ ಅವೆಲ್ಲವನ್ನು ಎತ್ತಂಗಡಿ ಮಾಡಿಸಿದಾಗ, ಅಲ್ಲಿ ಕೆಲವು ಪುರಾತನ ವಸ್ತುಗಳು ಸಿಕ್ಕಿದ್ದನ್ನು ಓದಿ ಖುಷಿಯಾಯಿತು.
ಹಂಪೆಯ ಪ್ರವಾಸ ಮಾಡುವಾಗ ಹಲವಾರು ಯೋಚನೆಗಳು ತಲೆಗೆ ಬಂದವು. ಮೊದಮೊದಲು ಹಂಪೆಯ ದುಸ್ಥಿತಿಯನ್ನು ನೋಡಿ ಬಹಳ ಬೇಸರವಾಯಿತು. ಕೃಷ್ಣದೇವರಾಯನ ದೊಡ್ಡಸ್ತಿಕೆಯನ್ನು ನೋಡಿ ಚೆನ್ನಾಗಿ ಅವನ್ನು ಬೈದುಕೊಂಡೆ. ಅವನು ಎಲ್ಲ ಬಹಮನಿ ರಾಜ್ಯಗಳನ್ನು ಗೆದ್ದಿದ್ದರು ಸಹ, ಅವಗಳನ್ನು ಅವನಿಗೆ ಹಿಂತಿರುಗಿಸಿ "ಯವನ ರಾಜ್ಯ ಸಂಸ್ಥಾಪಕ" ಎಂಬ ಬಿರುದನ್ನು ಪಡೆದುಕೊಂಡಿದ್ದ. ಅಲ್ಲಿ ವಜ್ರಗಳನ್ನು ಸೇರಿನಲ್ಲಿ ಮಾರುತ್ತಿದ್ದರು ಎಂದ ರಸ್ತೆಯನ್ನು ನೋಡಿದೆವು ... ಇಡೀ ನಗರದಲ್ಲಿ ಕಾಣುವ ಅದ್ಭುತವಾದ ಕಲ್ಲಿನ ಕೆತ್ತನೆಗಳು, ಕಟ್ಟಡಗಳು ನೋಡಿದೆವು . ಹಂಪೆಯಲ್ಲಿ ನೀವು ಎಲ್ಲೆ ನೋಡಿದರೂ ಹಾಳಾದ ದೇವಾಲಯವು ಕಾಣುತ್ತದೆ.
ನೀವು ಹಂಪೆಯನ್ನು ನೋಡಿದ ಯಾರನ್ನಾದರೂ ಕೇಳಿ, ಅದರ ಗತ ವೈಭವನ್ನು ನೆನೆಸಿಕೊಂಡು ಬೇಸರಪಡುತ್ತಾರೆ. ನನಗೆ ಅನ್ನಿಸಿದ್ದು - ನಾವು ಇನ್ನೂ ಎಷ್ಟು ದಿವಸ ಗತ ವೈಭವವನ್ನು ನೆನೆಸಿಕೊಂಡು ಕೊರಗುವುದು ? ಕೊರಗಿದಷ್ಟೂ "ಡಿಪ್ರೆಷನ್" ಗೆ ಜಾರುತ್ತೇವೆ ಹೊರತು, ಉದ್ದರವಾಗುವುದಿಲ್ಲ. ಮತ್ತೆ ಅಂತಹ ರಾಷ್ಟ್ರ ಕಟ್ಟಲು ಕನ್ನಡಿಗರಿಗೆ ಸದ್ಯವಿಲ್ಲವೇ ? ಸಾಮರ್ಥ್ಯವಿಲ್ಲವೇ? ಇಲ್ಲ ಖಂಡಿತ ಅದು ಸಾದ್ಯವಿದೆ. ಸಾಮರ್ಥ್ಯವಿದೆ . ಭಾರತದಲ್ಲಷ್ಟೆ ಅಲ್ಲ ವಿದೇಶದಲ್ಲೂ ಕನ್ನಡಿಗರೂ ಹೆಸರು ಮಾಡಿದ್ದರೆ, ಆದರೆ ಇಂದು ಕೊರತೆಯಿರುವುದು ಅವರಲ್ಲಿ ಕನ್ನಡದ ಅಭಿಮಾನ :(.
ಹಂಪೆ ದ್ವಾಪರದಲ್ಲಿ ಸಾಕ್ಷಾತ್ ಹನುಮನಿದ್ದ ಸ್ಥಳ. ಅವನು ಶಕ್ತಿಯ ಪ್ರತೀಕ. ಹಂಪೆಯಲ್ಲಿ ಎಲ್ಲೆಲ್ಲಿ ನೋಡಿದರೂ ನಿಮಗೆ ಅದ್ಭುತ ದೇವಲಯಗಳು ಕಾಣುತ್ತವೆ. ಆದರೆ ಮುಸ್ಸಲ್ಮಾನ ಸೈನ್ಯ ಬರುವಾಗ ಎಲ್ಲ ದೇವರು, ದೇವಾಲಯಗಳನ್ನು ಬಿಟ್ಟು (ಸಂಪತ್ತನ್ನು ಮಾತ್ರ ತೆಗೆಕೊಂಡು) ತಿರುಮಲರಾಯ ಓಡಿಹೋದ. ಜನರೂ ಓಡಿ ಹೋದರೂ. ಅಷ್ಟು ಪೂಜೆ ಮಾಡಿದರೂ, ಹಂಪೆಯ ರಕ್ಷಣೆ ಆಗಲಿಲ್ಲ. ಒಂದಂತು ನನಗೆ ಸ್ಪಷ್ಟವಾಯಿತು. ನಿಜವಾದ ಶಕ್ತಿಯಿರುವುದು ಮನುಷ್ಯನ ಸಾಮರ್ಥ್ಯದಲ್ಲಿ, ಪ್ರಯತ್ನದಲ್ಲಿ - ದೇವರಲ್ಲಿ, ವಿಗ್ರಹಗಳಲ್ಲಿ ಅಲ್ಲ. ದೈವ ಶಕ್ತಿಯಿದ್ದರೂ ಸಹ ಅದು ಮನುಷ್ಯ ಪ್ರಯತ್ನದಲ್ಲಿ ವ್ಯಕ್ತವಾಗಬೇಕು ಹಾಗೂ ವ್ಯಕ್ತವಾಗುತ್ತದೆ ಕೂಡ. ಹರಕೆಯಿಂದ, ಬೇಡುವುದರಿಂದ, ಸುತ್ತುವುದರಿಂದ, ಶಾಸ್ತ್ರ ಕೇಳುವುದರಿಂದ , ಭವಿಷ್ಯ ನೋಡುವುದರಿಂದ, ಹೆಸರು ಬದಲಾಯಿಸುವುದರಿಂದ ಏನೂ ಸದ್ಯವಿಲ್ಲ.
ಇಲ್ಲಿಗೆ ನನ್ನ ಹಂಪೆಯ ಪುರಾಣ ಮುಕ್ತಾಯ :)

neevu aavarana - s l bhyrappa navara kruthiyannu vodi, nimage innu besaravaguttade...
ReplyDelete