Sunday, August 9, 2015

ಕಯ್ಯಾರ ಕಿಞ್ಞಣ್ಣ ರೈಕಾಸರಗೂಡು ಹೋರಾಟ: ಮುಂದೆ ಏನು ?


ಕಿಞ್ಞಣ್ಣ ರೈ ಅವರು ಸಾಕಷ್ಟು ವರ್ಷಗಳ ಕಲ ಕನ್ನಡಕ್ಕಾಗಿ ಹೋರಾಡಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿ ತಮ್ಮ ಸಾರ್ಥಕ ಜೀವನ ಪ್ರಯಾಣ ಮುಗಿಸಿದ್ದರೆ. ಎಂಬತ್ತನೇ ಇಳಿವಯಸ್ಸಿನಲ್ಲೂ ಕೂಡ, ಕಾಸರಗೂಡು ಮಿಲನಿಕರಣ  ಕ್ರಿಯಾ ಸಮಿತಿ ರಚಿಸಿ, ಮಹಾಜನ್ ವರದಿ ಅನುಷ್ಟಾನಕ್ಕೆ ಹೊರಡಿದ್ದಾರೆ. 

ಆದರೆ "ಬೆಂಕಿ ಬಿದ್ದಿದೆ ನಮ್ಮ ಮನೆಗೆ ...  ಒ ಬೇಗ ಬನ್ನಿ,  ಕನ್ನಡ ಗಡಿ ಕಾಯೋಣ ಬನ್ನಿ, ಕನ್ನಡದ ನುಡಿ ಕಾಯೋಣ ಬನ್ನಿ" ಎಂಬ ಘೋಷಣೆ ಕನ್ನಡಿಗರನ್ನು ಎಬ್ಬಿಸುವಲ್ಲಿ ಸಾಕಷ್ಟು ಸಫಲವಾಗಲಿಲ್ಲ.ಶಾಲಾ ದಿನಗಳಲ್ಲಿ ಅವರ ಬಗ್ಗೆ ಓದಿದಾಗ, ಅವರ ಹೋರಾಟಕ್ಕೆ ನಾವೇಕೆ ಕೈ ಜೋಡಿಸುತ್ತಿಲ್ಲ ಎನಿಸುತ್ತಿತ್ತು. 

ಇಂದು ಕರ್ನಾಟಕದಲ್ಲಿ : ಎಲ್ಲೆಡೆ ಇಂಗ್ಲೀಷ್ ಮಾದ್ಯಮ ಜನಪ್ರಿಯವಾಗುತ್ತಿದೆ, ಕರ್ನಾಟಕದಲ್ಲಿ ಸರ್ಕಾರದ ಎಲ್ಲ ಸೇವೆಗಳು ಇಂಗ್ಲೀಷ್ ನಲ್ಲಿಯೇ ನಡೆಯುತ್ತವೆ, ಕೇರಳದಲ್ಲೂ ಬಹುಶಃ ಇಂಗ್ಲೀಷ್ ಗೊತ್ತಿದ್ದರೆ, ಹೇಗೂ ಜೀವನ ನಡೆಸಬಹುದು ಅನಿಸುತ್ತದೆ. ಹೀಗಾಗಿ ಎರಡು ಕಡೆಯ ಕನ್ನಡಿಗರಿಗೆ ಮಿಲಿನದಿಂದ ಸಾಕಷ್ಟು ಬದಲಾವಣೆಗಳು ಕಾಣದೆ ಹೋರಾಟ ಮಂಕಾಗಿರಬಹುದು. :-(.


ಬಹಳಷ್ಟು ಜನರು ಕನ್ನಡಕ್ಕಾಗಿ ಹೋರಾಟ ಮಾಡಿದರು ಸಹ ಇಂದು ಅವಕ್ಕೆ ಕಾವು ದೊರೆತಿಲ್ಲ.  ಆಷ್ಟೆ ಅಲ್ಲ ಮಹಾರಾಷ್ಟ್ರದಲ್ಲಿಯೂ ಸಹ ಬೆಳಗಾವಿ ಕಾವು ಆರುತ್ತಿದೆ, ಭಾಷೆ ಆಧಾರಿತ ಹೊಸ ರಾಜ್ಯ ಯಾವುದಕ್ಕೂ ಮನ್ನಣೆ ಸಿಗುತ್ತಿಲ್ಲ.

ಎಲ್ಲರಿಗೂ ಜಾಗತಿಕರಣದ ಇಂದಿನ ದಿನಗಳಲ್ಲಿ ಗಡಿಗಳು ಭೂಪಟದ ಮೇಲಿನ ಗೆರೆಗಳಷ್ಟೇ. ನಾವುಗಳು ಗಡಿಗಳನ್ನು ಮೀರಿ ಭಾಷೆಯನ್ನು ಬೆಳೆಸುವ ಅಗತ್ಯವಿದೆ. ಭಾಷೆಯಂದರೆ ಕೇವಲ ಒಂದು ಗಡಿ ರೇಖೆಯೊಳಗೆ ಉಪಯೋಗಿಸುವ ನುಡಿಯಲ್ಲ, ವಿಶ್ವದಾದ್ಯಂತ ಜನಾಂಗವನ್ನು ಜೋಡಿಸುವ ಸಾಧನೆ. ಕಾಸರಗೂಡಿನ ಕನ್ನಡಿಗರ ಸ್ಥಿತಿ ಇಂದು ಪ್ರಪಂಚದ ಬಹಳಷ್ಟು ಕನ್ನಡಿಗರಿಗಿದೆ.  UAE, UK, USA, Australia, Singapore ಅಥವಾ ಭಾರತ ಬೇರೆ ರಾಜ್ಯಗಳಲ್ಲಿ ಗಳಲ್ಲಿ ನೆಲೆಸಿರುವ ಕನ್ನಡಿಗರ ಪಾಡು ಸಹ ಬೇರೆಯದೆನಲ್ಲ.

ಇಂದಿನ ಜಗತ್ತಿನಲ್ಲಿ ಉಳಿಯಬೇಕೆಂದರೆ ಬೆಳೆಯಬೇಕು. ಕನ್ನಡವನ್ನು ಕರ್ನಾಟಕದ ಹೊರಗೂ ಸಹ ಬೆಳೆಸಬೇಕು, ಮುಂದಿನ ಜನಾಂಗಕ್ಕೆ ಕನ್ನಡ ಹಿರಿಮೆ, ಕನ್ನಡಿಗರ ಸಾಧನೆ ಎರಡು ತಿಳಿಸಬೇಕು. ಇವೆಲ್ಲಕ್ಕಿಂತ ಹೆಚ್ಚಾಗಿ ಕನ್ನಡಕ್ಕೆ ದುಡಿಮೆಯ ಶಕ್ತಿ ಕೊಡಬೇಕಿದೆ. ಅದು ಇಂದು ಕನ್ನಡಕ್ಕೆ ಬರಬೇಕೆಂದರೆ - ಜನರಲ್ಲಿ ಇಚ್ಛಾ ಶಕ್ತಿ ಇರಬೇಕು:" ದೇಶದ ಹೊರಗೂ ಕೂಡ".
ಕನ್ನಡಿಗರು ಮುಂದೆ ನಡೆಸಬೇಕಿರುವುದು,ಕೇವಲ ಕಾಸರಗೂಡಿನ ಹೋರಾಟವಲ್ಲ, ಜಗತ್ತಿನೆಲ್ಲೆಡೆ ನಾವು ಜಾಗೃತರಾಗಬೇಕಾಗಿದೆ.

ಇದನ್ನು ನಮ್ಮದೇ ದೇಶದ ಬೇರೆ ಜನರು ಒಳ್ಳೆಯ ಉದಾಹರಣೆ ಕೊಟ್ಟಿದ್ದಾರೆ: ಇಂದು ಕ್ಯಾಲಿಫೋರ್ನಿಯದ ಸಿಲಿಕಾನ್ ಕಣಿವೆಯಲ್ಲಿ - ಹಿಂದಿ, ತಮಿಳು, ತೆಲುಗು ಸಿನೆಮಗಳು ಉತ್ತಮವಾಗಿ ನಡೆಯುತ್ತವೆ. ಶಾಲೆಗಳಲ್ಲಿ - ತಮಿಳು, ತೆಲುಗು, ಹಿಂದಿ ಭಾಷೆಗಳನ್ನು ಒಂದು ವಿಷಯವಾಗಿ ಕಲಿಯಬಹುದು . ಇನ್ನೂ ಕೆಲವು ಕಡೆ ನಗರದಳಿತವು - ಭಾರತ ಕೆಲವು ಭಾಷೆಗಳಲ್ಲಿ ಜನರಿಗೆ ಮಾಹಿತಿ ನೀಡುತ್ತಿವೆ.  ಇಂದು ತಮಿಳು, ಹಿಂದಿಯನ್ನು ಹಲವಾರು ದೇಶಗಳಲ್ಲಿ ಆಡಳಿತ ಭಾಷೆಯ ಸ್ಥಾನವಿದೆ.

ಕನ್ನಡಕ್ಕಾಗಿ ಹೊರಡಲು ಇಂದಿನ ಟೆಕ್ನಾಲಜಿ ಯುಗದಲ್ಲಿ ಹೋರಾಡಲು ಹೆಚ್ಚಿಗೆ ಶ್ರಮ ಬೇಕಿಲ್ಲ.  "ಕನ್ನಡವರನ್ನು, ಕನ್ನಡಿಗರನ್ನು ಬೆಂಬಲಿಸುತ್ತೇವೆ, ಕನ್ನಡಕ್ಕಾಗಿ ಅಗ್ರಹಿಸುತ್ತೇವೆ" ಎನ್ನುವ ಮನೋಭಾವವಿದ್ದರೆ ಸಾಕು, ನಾವುಗಳು ಕನ್ನಡವನ್ನು ಮುಂದಿನ ಶತಮಾನಕ್ಕೆ ಕೊಂಡೊಯ್ಯಬಹುದು.  ಇದೆ ನಾವು ಕಿಞ್ಞಣ್ಣ ರೈ ಅವರಿಗೆ ಕೊಡುವ ಅತಿ ದೊಡ್ಡ ಶ್ರದ್ಧಾಂಜಲಿ ಎನಂತಿರಿ ?






 

 

1 comment:

  1. Good one Mahantesh. Agree with you that we should fight for Kannada beyond the boundries.

    ReplyDelete