ಸ್ನೇಹಿತರೆ,
"ಅವತಾರ್" ಚಲನಚಿತ್ರವು ಸಿನಿಮಾ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಅದರ ಕತೆ, ಪಾತ್ರಗಳು, ಗ್ರಾಫಿಕ್ಸ್ - ಎಲ್ಲವು ಕೂಡ ಸಿನಿಮಾ ಪ್ರಪಂಚದ ಅದ್ಭುತ ಎಂದು ಹೊಗಳಿದ್ದಾರೆ. ಹಣಗಳಿಕೆಯಲ್ಲಿ "ಟೈಟಾನಿಕ್ " ನಂತರ ದಾಖಲೆಯನ್ನು ಹಿಂಬಾಲಿಸುತ್ತಿದೆ. ಈಗ ನಾನು ಚರ್ಚೆ ಮಾಡುತ್ತಿರುವುದು ಈ ಮೇಲಿನ ಯಾವುದೇ ವಿಷಯದ ಮೇಲು ಅಲ್ಲ.
ಇದನ್ನು ನೋಡಿ -
http://ibnlive.in.com/news/avatar-scares-china-films-2d-version-blocked/108890-8.html
ಈ ಮೇಲಿನ ಮಿಂಚೆ , "ಅವತಾರ್" ಸಿನಿಮಾದ "೨-d" ಅವತರಣಿಕೆಯ ಪ್ರದರ್ಶನವನ್ನು ಚೀನಾದಲ್ಲಿ ನಿಲ್ಲಿಸಿದ್ದಾರೆ ಎಂದು ಹೇಳುತ್ತದೆ. ಅದಕ್ಕೆ ಕಾರಣ - "ಈ ಚಿತ್ರದಲ್ಲಿ ಮಾನವರ ಪಾತ್ರವು ಚೀನಾ ಸರ್ಕಾರದ ದೌರ್ಜನ್ಯವನ್ನು ಪ್ರತಿನಿದಿಸುತ್ತದೆ."
ಅಲ್ಲ ಗುರುವೇ, ಈ ಮಿಂಚೆಯನ್ನು ಓದಿದ ಯಾರಿಗಾದರು ಅನಿಸುತ್ತದೆ - ಹಾಗಾದರೆ "೩-D " ಚಿತ್ರದ ಪ್ರದರ್ಶನವನ್ನು ಯಾಕೆ ನಿಲ್ಲಿಸಿಲ್ಲ. ಇದಾನ್ನು ಯೋಚನೆ ಮಾಡುವ ಶಕ್ತಿಯು ನಮ್ಮ ವರದಿಗಾರರಿಗೆ ಇಲ್ಲವೇ. ಇಂತಹ "anti-china" ಸುದ್ದಿಗಳು ಎಲ್ಲೋ ಯುರೋಪೆನಲ್ಲೋ, ಅಮೆರಿಕಾದಲ್ಲೋ ಹುಟ್ಟಿರುತ್ತವೆ. ಅದನ್ನೇ ಯೋಚನೆ ಮಾಡದೆ ಯಥಾವತ್ತಾಗಿ ಬರೆಯುತ್ತವೆ.
ಅಂತು ಕೊನೆಗೆ, ವೆಬ್-ಸೈಟ್ ನವರು ಚೀನಾ ಸರ್ಕಾರ ತಾನು ಈ ಚಿತ್ರವನ್ನು ಬ್ಲಾಕ್ ಮಾಡಿಲ್ಲ ಎಂಬ ಹೇಳಿಕೆಯನ್ನು ಪ್ರಕಟಿಸಿವೆ.
"http://ibnlive.in.com/news/govt-not-forcing-avatar-off-screens-says-china/108919-8.html"
ಈಗ ಮತ್ತೊಂದು ವಿಷಯಕ್ಕೆ ಬರೋಣ. ಈ ಚಿತ್ರದೊಂದಿಗೆ ಎಲ್ಲ ಪಾಶ್ಚಿಮಾತ್ಯರಿಗೆ ಒಂದು ಸಂದೇಶ ಹೋಗಬೇಕಿತ್ತು. "ಈಗ ತಾವಿರುವ - ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಇವೆಲ್ಲವು ಕೂಡ, ಬೇರೊಂದು ಜನಾಂಗ, ಸಂಸ್ಕೃತಿಯನ್ನು ನಾಶಪಡಿಸಿ ಕಟ್ಟಲಾಗಿದೆ, ಅವರನ್ನು ಅಟ್ಟಾಡಿಸಿ ಕೊಂದು, ಅತ್ತ್ಯಾಚರವೆಸಾಗಿ ನಾಶದಂಚಿಗೆ ತಳ್ಳಲಾಗಿದೆ ಎಂದು (ತೇಟ್ ಸಿನಿಮಾದಲ್ಲಿ ತೋರಿಸಿದ ಹಾಗೆ)". ಆದರೆ ಇದು ಎಲ್ಲೂ ಬಂದಹಾಗಿಲ್ಲ.
ಸಮಯವಿದ್ದರೆ ಇದನ್ನು ಸ್ವಲ್ಪ ಓದಿ -
http://en.wikipedia.org/wiki/Native_Americans_in_the_United_States
http://en.wikipedia.org/wiki/American_Indian_Wars
ಅದಕ್ಕೆ ಅಲ್ಲವೇ - "ವೇದಾಂತ ಹೇಳೋಕೆ, ಬದನೆ ಕಾಯಿ ತಿನ್ನೋಕೆ" :-)
This comment has been removed by the author.
ReplyDelete