"ವಿಜಯ ಕರ್ನಾಟಕ"ದಲ್ಲಿ ೨೭-೦೧-೨೦೧೦ ಪ್ರಕಟವಾದ ಮುನಿಶ್ರೀ ತರುಣಸಾಗರ ಜೀ ಅವರ ಲೇಖನ.
"ಹಿಂದಿ ರಾಷ್ಟ್ರಭಾಷೆಯಾಗಿದೆ. ಹಿಂದಿಗೆ ಅವಮಾನ ಮಾಡಿದರೆ ಅದು ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ .................................................
ಮರಾಠಿ ಮಹಾರಾಷ್ಟ್ರದ ಮುಖ್ಯ ಭಾಷೆ. ನಮಗೆ ನಮ್ಮ ಭಾಷೆ ಬಗ್ಗೆ ಹೆಮ್ಮೆ ಇರಬೇಕು. ಆದರೆ ಹಿಂದಿ ಅಮ್ಮನಾದರೆ ಮರಾಠಿ ಚಿಕ್ಕಮ್ಮ ಇದ್ದಂತೆ ಎಂಬುದನ್ನು ಯಾರು ಬರೆಯಬಾರದು. ತಾಯೀಯ ಸ್ಥಾನ ಚಿಕ್ಕಮನಿಗಿಂತಲೂ ಮಿಗಿಲಾಗಿರುತ್ತದೆ."
ಅಬ್ಬ!! ಇಷ್ಟು ದಿನ ಈ ಮಹಶಯನಿಂದ ಈ ಮೇಲಿನ ಪ್ರವಚನ ಕೆಳುವುದೊಂದು ಬಾಕಿ ಇತ್ತು. ಈಗ ಕನ್ನಡಿಗರ ಜನ್ಮ ಪಾವನವಾಗಿದೆ.
ತಾಯೀ ಯಾರು ಚಿಕ್ಕಮ್ಮ ಯಾರು ಅಂತ ಈತನಿಂದ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಅಲ್ಲ ತರುಸಗರ್ ಜೀ ಅವರೇ ಎಲ್ಲರು ಮೊದಲು ಕಲಿಯುವ ಭಾಷೆಯನ್ನು ಮಾತೃಭಾಷೆ ಅನ್ನುತ್ತಾರೆ ಹೊರತು ದೊಡ್ಡಮ್ಮ ಚಿಕ್ಕಮ್ಮ ಭಾಷೆ ಎಂದಲ್ಲ. ಮೇಲಾಗಿ ಗುಜುರಾತ್ ಉಚ್ಚನ್ಯಾಯಾಲಯವೇ ತೀರ್ಪಿತ್ತಿದೆ - ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು
"http://www.deccanherald.com/content/48899/hindi-not-national-language-gujarat.html". ದಯವಿಟ್ಟು ಇದನ್ನು ತಿಳಿಯಿರಿ.
ಮೊದಲೇ ಇಂಗ್ಲಿಷ್ ನಿಂದ ಮೂಲೆಗುಂಪಾಗಿರುವ ಭಾರತೀಯ ಭಾಷೆಗಳ ಮೇಲೆ, ತಮ್ಮ ಮಾತೃಭಾಷೆ ಹಿಂದಿಯನ್ನು "ರಾಷ್ಟ್ರಭಾಷೆ" ಅನ್ನುವ ಹಿಂಬಾಗಿಲಿನಿಂದ ಹೇರಬೇಡಿ.
ತಾವು ತಮ್ಮ ಪ್ರವಚನವನ್ನು ಕೇವಲ ಅಧ್ಯಾತ್ಮಕ್ಕೆ ಸ್ಥಿಮಿತಗೊಳಿಸಿದರೆ ಕನ್ನಡಿಗರಿಗೆ ದೊಡ್ಡ ಉಪಕಾರವಾಗುತ್ತದೆ.
No comments:
Post a Comment