ನಾನು ಕೂಡ ಕನ್ನಡ ಹಾಡುಗಳನ್ನು ಕೇಳಬಹುದು ಎಂದು ಅಂತಹ ಒಂದು ಮೊಬೈಲ್ ಅನ್ನು (ನೋಕಿಯಾ X6 ) ಕೊಂಡುಕೊಂಡೆ . ಆದರೆ ನನಗೆ "OVI " ಅಂತರ್ಜಾಲ ತಾಣಕ್ಕೆ ಹೋದ ಮೇಲೆ ತಿಳಿಯಿತು, ಅಲ್ಲಿ ಇದ್ದುದು ಕೇವಲ ೧-೨ ಕನ್ನಡ ಹಾಡುಗಳು. ಇದರಿಂದ ನನ್ನಂತಹ ಕನ್ನಡ ಚಿತ್ರಗೀತೆಯ ರಸಿಕರಿಗೆ ಹಾಗೂ ನಿರ್ಮಾಪಕರಿಗೆ; ಇಬ್ಬರಿಗೂ ನಷ್ಟವಾಗುತ್ತದೆ.
ಹಾಗೆಯೇ ನೋಕಿಯಾ ದವರು GPS ಸೇವೆಗಳನ್ನು ಹಲವಾರು ಭಾಷೆಗಳಲ್ಲಿ ಕೊಡುತ್ತಾರೆ, ಕನ್ನಡವನ್ನು ಬಿಟ್ಟು.
ಇಷ್ಟೇ ಬಿಡಪ್ಪ ಎಂದು ನೀವು ಮುಂದೆ ಹೋಗಿ, ನೋಕಿಯಾ ಬ್ರೌಸೆರ್ ನಲ್ಲಿ ಕನ್ನಡ ಅಂತರ್ಜಾಲ ತಾಣ ತೆಗೆದರೆ, ಅಲ್ಲಿ ಕಾಣುವುದು, ಕನ್ನಡದ ಅಕ್ಷರದ ಬದಲಿಗೆ, ಬರಿ ಡಬ್ಬಗಳು. ಕನ್ನಡ ಅಕ್ಷರಗಳನ್ನು ನೋಕಿಯಾ ಬ್ರೌಸೆರ್ ಬೆಂಬಲಿಸುವುದಿಲ್ಲ.
ಮೇಲಿನ ಎಲ್ಲ ಸೌಲಭ್ಯವನ್ನು ಕನ್ನಡದಲ್ಲಿ ಆಗ್ರಹಿಸಿ, ನೋಕಿಯಾ ದವರಿಗೆ ಮಿಂಚೆಯನ್ನು ಕೊಳುಹಿಸೋಣವೇ? (ನೋಕಿಯಾ ಮೊಬೈಲ್ ಇಲ್ಲದವರು, ನೋಕಿಯಾ ಮೊಬೈಲ್ ಕೊಳ್ಳುವ ಯೋಚನೆ ಇದೆಯಂದು ಮಿಂಚೆ ಕಳುಹಿಸಬಹುದು)
ದೂರನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ :
http://support.ovi.com/index.
ಅಂತು ಕೊನೆಗೆ ನೋಕಿಯಾ ಗ್ರಾಹಕರ ಒತ್ತಾಯಕ್ಕೆ ಮಣಿದು, ಕನ್ನಡದ ಹಾಡುಗಳನ್ನು OVI ಮ್ಯೂಸಿಕ್ ನಲ್ಲಿ ಹಾಕಿದ್ದಾರೆ. ಇಲ್ಲಿ ನೋಡಿ
ReplyDeletehttp://music.ovi.com/in/en/pc/genre/kannada/kannada .
ಇನ್ನು ಈ ಸೌಲಭ್ಯದ ಸರಿಯಾದ ಪ್ರಾಯೋಜನ ಪಡೆಯುವುದು ನಮ್ಮ ಕರ್ತವ್ಯ.