Monday, August 30, 2010

ಪೆಟ್ರೋ ಡಾಲರ್ ಮತ್ತು ಅದರ ಪುರಾಣ

ಗೆಳೆಯರೇ,

ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ  ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧೦೦ ವರೆಗೂ ಜಾಸ್ತಿಯಾಯಿತು?  ಆರ್ಥಿಕ ಸಂಕಷ್ಟವಾದಾಗ ಅಮೆರಿಕ ಏಕೆ , ೯೦ರ ದಶಕದಲ್ಲಿ ಭಾರತದಂತೆ ಚಿನ್ನವನ್ನು ಒತ್ತೆ ಇಡಲಿಲ್ಲ ? ಅಮೆರಿಕಾವು ತೈಲಕ್ಕಾಗಿಯೇ (ತನ್ನ ಹತ್ತಿರವೇ ಸಾಕಷ್ಟು ಇದ್ದರು ) ಇರಾಕ್ ಮೇಲೆ ಯುದ್ಧ ಸಾರಿತೆ? ಇದು ನಿಜವೇ?

ಇದಕ್ಕೆಲ್ಲ ಉತ್ತರ ಒಂದೇ - ಪೆಟ್ರೋ ಡಾಲರ್.  ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ.

ಈ ಕಥೆ ಶುರುವಾಗುವುದು ಎರಡನೆಯ ಮಹಾಯುದ್ಧದ ನಂತರ.  ಇಡೀ ಯುರೋಪೆ, ಸಂಪನ್ಮೂಲ ಕೊರತೆಯಿಂದ, ಹಣದ ಕೊರತೆಯಿಂದ ಬಳಲುತ್ತಲಿತ್ತು. ಆಗ ಅಮೆರಿಕ ಸರ್ಕಾರ , ಯೂರೋಪಿಗೆ ಸಹಾಯ ಮಾಡಿ, ಸಂಪನ್ಮೂಲಗಳನ್ನು ಹಾಗು ಅಮೆರಿಕಾದ ಕಂಪನಿಗಳಿಂದ ನೆರವನ್ನು ಪಡೆಯಲು ಡಾಲರ್ ನೀಡಿತು.  ಯುದ್ಧದ ನಂತರ, ಅಮೆರಿಕದ ಆರ್ಥಿಕತೆಯು ಸದೃಡ ಹಾಗು ಬಲಿಷ್ಟವಾಯಿತು ... ಈ ಎಲ್ಲ ಕಾರಣಗಳಿಂದ ಅಮೆರಿಕಾದ ಡಾಲರ್ ಗೆ, ಜಗತ್ತಿನಲ್ಲಿ  ಬಹಳ ಮಹತ್ವ ಬಂತು.

ಸರಿ ಸುಮಾರು ಎರಡನೇ ಮಹಾಯುದ್ಧದ ನಂತರ, ಪೆಟ್ರೋಲ್ ಮೂಲಕ,  ಅರಬರಿಗೆ ಸಂಪತ್ತು ಹರಿದುಬರತೊಡಗಿತು.  ಬಂದ ದುಡ್ಡನ್ನು ಹೇಗೆ ಇಡಬೇಕೆಂದು ಯೋಚಿಸುತ್ತಿರುವಾಗ, ಜಗತ್ತಿನಲ್ಲಿ ಎಲ್ಲ ಕಡೆ ಬೆಲೆಯಿರುವ ಡಾಲರ್ ನಲ್ಲಿ ಸಂಗ್ರಹಿಸಲು ಯೋಚಿಸಿ,  ತೈಲ ವ್ಯಾಪಾರಕ್ಕಾಗಿ ಎಲ್ಲ ದೇಶಗಳಿಂದ ಡಾಲರ್ ಕೇಳತೊಡಗಿದರು .   ಈಗ ತಗೊಳ್ಳಿ ಡಾಲರ್ ಗೆ ಚಿನ್ನದ ಬೆಲೆ ಬಂತು. ಜಗತ್ತಿನಲ್ಲಿ ಡಾಲರ್ ಹುಚ್ಚು ಪ್ರಾರಂಭವಾಯಿತು.  ಎಲ್ಲರು ಡಾಲರ್ ಗಾಗಿ, ಅಮೆರಿಕಾಗೆ ರಫ್ತು ಮಾಡುತ್ತಿದ್ದಾರೆ.   ಈಗ ಅಮೇರಿಕಾದಲ್ಲಿ ಎಲ್ಲವೂ ಕಡಿಮೆ ಬೆಲೆಗೆ ದೊರೆತು, ಅಲ್ಲಿ ಜನರ ಜೀವನ ಮಟ್ಟ ಮತ್ತೂ ಪ್ರಗತಿ ಕಂಡಿತು. (ಆದರೆ - ಬೇರೆ ದೇಶದ ಜನರು, ಡಾಲರ್ ಗಾಗಿ ತಮ್ಮ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡಿಕೊಳ್ಳುತ್ತಿದ್ದರೆ.  ಹಾಗು ಈ ಸಂಪತ್ತು ಕೆಲವೇ ಕೆಲವು ಜನರ ಕೈಯಲ್ಲಿ ನಲಿದಾಡುತ್ತಿದೆ. ಉದಾಹರಣೆ: ಗಣಿ ಧಣಿಗಳು ಅದಿರು ರಫ್ತು ಮಾಡುತ್ತಿರುವ ಹಾಗೆ.  ಇಷ್ಟೇ ಅಲ್ಲ ನಮ್ಮ ದೇಶದ ಉತ್ಕೃಷ್ಟ ಬಾಸ್ಮತಿ ಅಕ್ಕಿ, ಕಾಶ್ಮೀರದ ಆಪಲ್  ಎಲ್ಲವು ನಿಮಗ ಕಡಿಮೆ ಬೆಲೆಗೆ ಅಮೇರಿಕಾದಲ್ಲಿ ಸಿಗುತ್ತದೆ. ನಮಗೆ ಎರಡನೇ ದರ್ಜೆಯ ವಸ್ತುಗಳು). ಇಂದು ಜಗತ್ತಿನಲ್ಲಿ ಸುಮಾರು ೩೦೦ ವರ್ಷಗಳಿಂದ ಇತ್ತೀಚೆನವರೆಗೆ, ಮುದ್ರಿಸಿರುವ ಎಲ್ಲ ಡಾಲರ್ ನೋಟುಗಳಲ್ಲಿ , ಅರ್ಧಕ್ಕಿಂತ ಹೆಚ್ಚಿನ ನೋಟುಗಳು ಅಮೆರಿಕಾದ ಹೊರಗೆ, ವಿವಿಧ ದೇಶಗಳ ಖಜನೆಗಳಲ್ಲಿದೆ.  

ಯಾವುದೇ ದೇಶವು, ತನ್ನು ನೋಟುಗಳನ್ನು ಯದ್ವಾ-ತದ್ವ ಮುದ್ರಿಸುವುದಿಲ್ಲ. ಹಾಗೇನಾದರು ಮುದ್ರಿಸಿದರೆ - ತಡೆಯಲಾಗದ ಹಣದುಬ್ಬರವಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿದು ಬೀಳುತ್ತದೆ. (ಜಿಂಬಾಬ್ವೆ - ಇದಕ್ಕೆ ಉದಾಹರಣೆ) .  ಹಾಗಾಗಿ ದೇಶಗಳು - ತಮ್ಮಲಿರುವ ಚಿನ್ನದ ಸಂಗ್ರಹವನ್ನು ಅನುಸರಿಸಿ ನೋಟನ್ನು ಮುದ್ರಿಸುತ್ತವೆ . ಇದೆ ಕಾರಣಕ್ಕಾಗಿಯೇ ಭಾರತವು ೧೯೯೦ ರಲ್ಲಿ ಚಿನ್ನವನ್ನು, ವಿಶ್ವ ಬ್ಯಾಂಕ್ನಲ್ಲಿ ಚಿನ್ನವನ್ನು ಇಟ್ಟು , ದುಡ್ಡನ್ನು ತಂದಿದ್ದು.  ಆದರೆ  ಅಮೆರಿಕಾಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ ಅವರು ಎಷ್ಟೇ ನೋಟುಗಳನ್ನು ಮುದ್ರಿಸಿದರೂ, ವಿವಿಧ ದೇಶಗಳು ಡಾಲರ್ ಅನ್ನು ಸಂಗ್ರಹಿಸಿರುವುದರಿಂದ, ಹಣದುಬ್ಬರ ಒಂದು ಮಟ್ಟಿಗೆ ಹಿಡಿತದಲ್ಲಿರುತ್ತದೆ

ಸಾಲಗಾರ ದೇಶವಾದ, ಅಮೇರಿಕಾದಲ್ಲಿ ೨೦೦೮-೨೦೦೯ ಆರ್ಥಿಕ ಕುಸಿತವಾದಾಗ ಜನರಲ್ಲಿ, ಸರ್ಕಾರದಲ್ಲಿ ಇಬ್ಬರಲ್ಲೂ ಕಾಸಿಲ್ಲ.
ಹಾಗಾಗಿ ಅಮೆರಿಕ ದೇಶವು, ಯದ್ವಾ-ತದ್ವ ನೋಟುಗಳನ್ನು (ಸಾವಿರಾರು ಕೋಟಿ) ಪ್ರಿಂಟ್ ಮಾಡಿತು (ಸುಮಾರು ೭೦ ರ ದಶಕದಲ್ಲಿಯೇ ಅಮೆರಿಕಾವು, ತನ್ನ ಕರ್ರೆನ್ಸಿಗೆ ಇರುವ ಮೌಲ್ಯವನ್ನು ಅರಿತು, ತನ್ನಲ್ಲಿರುವ ಚಿನ್ನದ ಮೌಲ್ಯವನ್ನು ಮೀರಿ ನೋಟು ಮುದ್ರಿಸಿತು ). .ಜಗತ್ತಿನ ಎಲ್ಲ ದೇಶಗಳು ಡಾಲರ ಪಡೆಯಬೇಕಾದರೆ - ಕಷ್ಟ ಪಟ್ಟು ಸೇವೆ, ಸಂಪನ್ಮೂಲಗಳನ್ನು ರಫ್ತು ಮಾಡಬೇಕ. ಆದರೆ ಅಮೆರಿಕ ___ ಒರೆಸಿಕೊಳ್ಳುವ ಪೇಪರಿನ ಬದಲಿಗೆ, ಅದೇ ಕಾಗದದಲ್ಲಿ ನೋಟು ಮೊದ್ರಿಸಿದರಾಯಿತು -   ಇಲ್ಲಿ ಅಮೆರಿಕಾವು ಜಗತ್ತಿನಲ್ಲಿ ಅತೀ ಹೆಚ್ಚು ಚಿನ್ನದ ಸಂಗ್ರಹ ಹೊಂದಿದ್ದರೂ, ಒಂದೇ ಒಂದು ಗ್ರಾಂ ಚಿನ್ನವನ್ನು ಒತ್ತೆ ಇಡಲಿಲ್ಲ. ತನ್ನ ಕರೆನ್ಸಿಗೆ ಇರುವ ಮೌಲ್ಯವನ್ನು ಸರಿಯಾದ ಸಮಯದಲ್ಲಿ ಚೆನ್ನಾಗಿ (ದೂರು) ಉಪಯೋಗಿಸಿಕೊಂಡಿತು. ಇದರಿಂದ ಡಾಲರ್ ಬೆಲೆ ಕಡಿಮೆಯಾಗಿ,  ಅರಬ್ ದೇಶಗಳು ಪೆಟ್ರೋಲ್ ಬೆಲೆ ಏರಿಸಿದವು. (ಚೀನಾದ ಬೇಡಿಕೆ ಕೂಡ ಒಂದು ಕಾರಣ)  .

 ಜಗತ್ತಿನ ಜನರಿಗೆ ಹಾಗು ವಿವಿಧ ದೇಶಗಳಿಗೆ,  ಡಾಲರ್ ನ ಸ್ಥಿರತೆಯ ಬಗ್ಗೆ ಸಂದೆಹವಾಗಿ ಎಲ್ಲರು ತಮ್ಮಲ್ಲಿರುವ ಡಾಲರ್ ಅನ್ನು ಚಿನ್ನದಲ್ಲಿ ಹೂಡಲು ಶುರುಮಾಡಿದರು.  ಹಾಗಾಗಿಯೇ ಚಿನ್ನದ ಬೆಲೆಯೂ, ಅಮೆರಿಕಾದ ಆರ್ಥಿಕ ದುಸ್ಥಿತಿಯ ನಂತರ ಇಷ್ಟು ಹೆಚ್ಚಿರುವುದು.

ಇನ್ನು ಇರಕ್ ವಿಚಾರಕ್ಕೆ ಬಂದರೆ - ಸದ್ದಾಂ ಹುಸಇನ್ ೨೦೦೦ ಇಸಿವಿಯ, ತನ್ನು ದೇಶ ರಫ್ತು ಮಾಡುವ ತೈಲಕ್ಕೆ - ಯುರೋ ತೆಗೆದು ಕೊಳ್ಳಲು ಶುರು ಮಾಡಿದ. ಇದು ಯಶಸ್ವಿಯಾಗಿ ಮುಂದುವರಿದರೆ, ಬೇರೆ ದೇಶಗಳು ಅನುಸರಿಸಿದರೆ ಆಗಬಹುದಾದ ಅಪಾಯವನ್ನು ಮನಗೊಂಡ ಅಮೆರಿಕ, (ಅಣ್ವಸ್ತ್ರ ವಿದೆಯೆಂದು ಸುಳ್ಳು ಹೇಳಿ), ಆಕ್ರಮಣ ಮಾಡಿದರು. ಒಂದೇ ಒಂದು ಸ್ಕೂಟರ್ ಮಾಡಲು ಸಹ ತಾಕತ್ತಿಲ್ಲದ ಇರಕ್, ಅಣ್ವಸ್ತ್ರ ತಯಾರಿಸುವುದೇ ?

ಇಷ್ಟೇ ಅಲ್ಲ, ಅಮೆರಿಕಾವು ಡಾಲರ್ ಉಪಯೋಗಿಸಿ, ಜನರ ಆರೋಗ್ಯದೊಂದಿಗೂ ಚೆಲ್ಲಾಟವಾಡುತ್ತಿದೆ.  ಎಲ್ಲರಿಗೋ ಗೊತ್ತಿರುವಂತೆ ಆಫ್ರಿಕಾದಲ್ಲಿ AIDS ಮಾರಿ ಭಯಂಕರವಾಗಿದೆ.  ಅಮೆರಿಕಾದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ನಡೆಯುವ AIDS ಔಶಧಿಗಳನ್ನು ಪರೀಕ್ಷಿಸಲು,  ಹಲವಾರು ವರ್ಷಗಳ ನಂತರದ ಅದರ ಪರಿಣಾಮಗಳನ್ನು ತಿಳಿಯಲು,  ಆಫ್ರಿಕಾದ ಜನರು ಈಗ ಲ್ಯಾಬ್ನ ಇಲಿಗಳಗಿದ್ದರೆ.  ಅಮೆರಿಕ ಸರ್ಕಾರವು, ಹಣವನ್ನು ಸಹಾಯ ಅಂತ ಸುಳ್ಳು ಹೇಳಿ - ಕೋಟ್ಯಂತರ ಡಾಲರ್ಗಳನ್ನು ಆಫ್ರಿಕಾದ ದೇಶಗಳಿಗೆ ಕೊಡುತ್ತದೆ. ನಿಯಮದ ಪ್ರಕಾರ, ಆ ದೇಶಗಳು ಆ ಹಣವನ್ನು ಉಪಯೋಗಿಸಿ ಔಷಧಗಳನ್ನು ಅಮೇರಿಕಾದ ಕಂಪನಿಗಲಿಂದಲೇ ಪಡೆಯಬೇಕು.  ಹೀಗೆ ಆಫ್ರಿಕಾವನ್ನು ತಮ್ಮ ಪ್ರಯೋಗಾಲಯ ಮಾಡಿಕೊಂಡಿದ್ದಾರೆ.

ಇಲ್ಲಿ ಅರಬರು, ಪೆಟ್ರೋ ಡಾಲರ್ ನ , ಕರೆನ್ಸಿ ಬದಲಿಸುವುದು ಸುಲಭವಲ್ಲ . ಅವರಿಗಾಗಲೇ ೩೦-೪೦ ವರ್ಷಗಳಿಂದ ಸಹಸ್ರಾರು ಕೋಟಿ ಡಾಲರ್ಗಳನ್ನು ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ,  ಅದರಲ್ಲಿ ಬಹುಪಾಲು ಹಣವನ್ನು - ಅಮೆರಿಕ ದಲ್ಲೇ ಹೂಡಿದ್ದಾರೆ.  ಈಗೆನಾದರು ಅವರು ಕರೆನ್ಸಿ ಬದಲಾಯಿಸಿದರೆ, ಅವರ ಹಣವೆಲ್ಲೇ ಅರಬ್ಬೀ ಸಮುದ್ರದಲ್ಲಿ ಮುಳುಗಿದಂತೆ.


ಇದರಿಂದ ಅಮೆರಿಕಾಗೆ ಕೂಡ ಬಹಳ ನಷ್ಟವಾಗಿದೆ - ಅಲ್ಲಿ ಬಟ್ಟೆ, ತೂಥ್ ಬ್ರುಶ್, ಗಡಿಯಾರ ಇಂತಹ ವಸ್ತುಗಳು ತಯರಾಗುವುದೇ ಇಲ್ಲ. ಎಲ್ಲವು ಅಮದಗುತ್ತದೆ (ಐಫೋನ್ ಕೂಡ :) ).  ತಂತ್ರಜ್ಞಾನ ಕೆಲಸವೆಲ್ಲವೂ ಬೇರೆ ದೇಶಕ್ಕೆ ಹೋಗುತ್ತಿವೆ. ಎಲ್ಲವು ಸುಲಭವಾಗಿ ದೊರೆಯುವುದರಿಂದ,  ಜನರು ಕಷ್ಟಪಡುವುದಿಲ್ಲ (ಓದುವುದಿಲ್ಲ ಕೂಡ). ಹೀಗಾಗಿ ಅಲ್ಲಿ ಜನರ ಕಾರ್ಯದಕ್ಷತೆಯು ಕುಸಿಯುತ್ತಿದೆ.ಇದು ಅವರ ದೇಶಕ್ಕೆ ಒಂದು ದೊಡ್ಡ ಶಾಪ.



ಇಷ್ಟು ನೋಡಿ - ಪೆಟ್ರೋ ಡಾಲರ್ ನ ಪುರಾಣ ... ಈ ನಡುವೆ, ಜನರು ಯುರೋ ವನ್ನು ಸ್ವಲ್ಪ ನೆಚ್ಚುತ್ತಿದ್ದರೆ. ಮುಂದೆ ನೋಡೋಣ ಏನಾಗಬಹುದು.

Friday, August 20, 2010

ಹರಕೊಂಡ್ ತಿನ್ನುವವನನ್ನ ಮುರ್ಕೊಂಡ್ ತಿನ್ನುವುದು

ನಮಸ್ಕಾರ,

ನಮಗೆಲ್ಲ ತಿಳಿದಿದೆ ... ಸಂಸ್ಕೃತ ಒಂದು  ಪ್ರಾಚೀನ, ಪರಿಪೂರ್ಣ ಭಾಷೆ.  ಅದೊಂದು ಜ್ಞಾನ ಭಂಡಾರ.  ಸಂಸ್ಕೃತವನ್ನು ಉಳಿಸಬೇಕು. ಅದರಿಂದ ಜ್ಞಾನವನ್ನು ಪಡೆದು, ನಮ್ಮ ಜೀವನದಲ್ಲಿ, ಇಂದಿನ ವಿಜ್ಞಾನದಲ್ಲಿ, ರಾಜಕೀಯದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು.  ಕೆಲವೊಂದು ಸಂಸ್ಥೆಗಳು ಈ ದಿಸೆಯಲ್ಲಿ ಅದ್ಭುತ ಕೆಲಸ ಮಾಡುತ್ತಿವೆ.  ಇಷ್ಟೇ ಆದರೆ ಸಾಕು. ಎಲ್ಲರಿಗೂ ಪ್ರಯೋಜನವಾಗುತ್ತದೆ.

ಈಗ ಒಂದು ಹೊಸ ಟ್ರೆಂಡ್ ಶುರುವಾಗಿದೆ - ಸಂಸ್ಕೃತ ಗ್ರಾಮಗಳನ್ನು, ಮನೆಗಳನ್ನು ನಿರ್ಮಿಸುವುದು - ಸಾಸನ ಒರಿಸ್ಸಾ, ಜಿಹಿರಿ ಮಧ್ಯಪ್ರದೇಶ , ಮತ್ತೂರು ಕರ್ನಾಟಕ ... (ಇದಕ್ಕೆ ಸಂಸ್ಕೃತ ಭಾರತೀಯಂತಹ ದೊಡ್ಡ ಸಂಸ್ಥೆಗಳು ಹಾಗು ಹಲವಾರು ವ್ಯಕ್ತಿಗಳ ಪ್ರಯತ್ನವಿದೆ).  ಅಂದರೆ ಆ ಗ್ರಾಮಗಳಲ್ಲಿ ಎಲ್ಲರು ಸಂಸ್ಕೃತವನ್ನು ಮಾತನಾಡಲಿಕ್ಕೆ ಬಳಸುತ್ತಾರೆ.

ಈಗಾಗಲೇ ಇಂಗ್ಲಿಷ್, ಹಿಂದಿಯಿಂದ ಉಸಿರಾಡಲು ಕಷ್ಟಪಡುತ್ತಿರುವ ಭಾರತೀಯ ಭಾಷೆಗಳಿಗೆ ಇನ್ನೊಂದು ಗುದ್ದು ಕೊಟ್ಟ ಹಾಗೆ. ಈಗಾಗಲೇ ನಮ್ಮ ದೇಶದಲ್ಲಿ ಹಲವಾರು ಭಾಷೆಗಳು ನಶಿಸಿವೆ, ಇನ್ನು ಕೆಲವು ಅವಸಾನದ ಅಂಚಿನಲ್ಲಿವೆ. ನಮ್ಮ ದೇಶದಲ್ಲಿ ತಮ್ಮ ಮಾತೃಭಾಷೆ  ಬಳಸುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ, ಅಂಥಹ ಪರಿಸ್ಥಿತಿಯಲ್ಲಿ ಮಿಕ್ಕಿರುವ ಜನರನ್ನು ಸಂಸ್ಕೃತ ದಿನನಿತ್ಯ ಬಳಸಲು ಪ್ರಚೋದಿಸುವುದು ಎಷ್ಟು ಸರಿ?

ನಮಗೆ ಸಂಸ್ಕೃತ ಬೇಡವೆಂದಲ್ಲ. ಅದನ್ನು ಓದಿ, ಜ್ಞಾನವನ್ನು ಪಡೆದು, ಇಂದಿನ ಜಗತ್ತಿಗೆ ಅನ್ವಯಿಸಲು ಪಾಂಡಿತ್ಯಪೂರ್ಣವಾದ ಕೆಲ ವ್ಯಕ್ತಿಗಳು ಸಾಕು. ಸಂಸ್ಕೃತ ಗ್ರಾಮಗಳಲ್ಲ, ಸಂಸ್ಕೃತ ಮನೆಗಳಲ್ಲ. ಈಗ ಎಲ್ಲಕಿಂತ ಪ್ರಮುಖವಾಗಿ ಆಗಬೇಕಾಗಿರುವುದು ನಮ್ಮ ಮಾತೃಭಾಷೆಗಳನ್ನು, ಅವಸಾನದಲ್ಲಿ ಇರುವ ಹಲವಾರು  ಉಳಿಸುವುದು, ಬೆಳೆಸುವುದು.


ನಿಮ್ಮ ಏನಂತೀರಿ ಗೆಳೆಯರೇ ?

Wednesday, August 11, 2010

ಮಾಲ್ ಗಳು ಹಾಗೂ ಸ್ಥಳೀಯ ವ್ಯಾಪಾರ

ಜಾಗತಿಕರಣದಿಂದ ಸ್ಥಳೀಯ ವ್ಯಾಪಾರಕ್ಕೆ ಆಗುತ್ತಿರುವೆ ತೊಂದರೆಗಳೆಲ್ಲ ನಮಗೆ ಗೊತ್ತಿದೆ.


ಆದರೆ ಈಗ ನಮ್ಮ ಸ್ಥಳೀಯ ವ್ಯಾಪಾರಕ್ಕೆ ತೊಂದರೆ ಆಗುತ್ತಿರುವುದು, ಯಾವುದೋ ವಿದೇಶಿ ಕಂಪನಿಯಿಂದಲ್ಲ.  ನಮ್ಮದೇ ಆದ "ರಿಲೆಯನ್ಚೆ ಫ್ರೆಶ್", "ಸ್ಪಾರ್", "ಫುಡ್ ವರ್ಲ್ಡ್", "ಟೋಟಲ್", "ಈ-ಜೊನೆ"  - ಇವುಗಳಿಂದ.
ಇಂತಹವುಗಳಿಂದ ನಮ್ಮ ದೇಶದ ಅರ್ಥಿಕ ಸ್ಥಿತಿಯೇ ಬದಲಾಗುತ್ತಿದೆ,  ಇವರುಗಳ ಹಿಡಿತಕ್ಕೆ ಜಾರುತ್ತಿದೆ.

ಒಮ್ಮೆ ಯೋಚನೆ ಮಾಡಿ. ನಾವು ದಿನ ಬೆಳಿಗ್ಗೆ ಎದ್ದು,  ಸೊಪ್ಪು ಮಾರುವವನಿಂದ,  ತರಕಾರಿ ಗಡಿಯವನಿಂದ, ಮನೆ ಪಕ್ಕದ ಸಣ್ಣ ದಿನಸಿ ಅಂಗಡಿಯವನಿಂದ,  ಸಾಕಷ್ಟು ಪದಾರ್ಥಗಳನ್ನು ಕೊಳ್ಳುತ್ತಿದ್ದೆವು.  ಟಿವಿ, ಕಂಪ್ಯೂಟರ್, ವಿದ್ಯುನ್ಮಾನ ಸಾಮಗ್ರಿಗಳು ಬೇಕೆಂದರೂ ಸಹ ಮನೆಯ ಹತ್ತಿರದ ಅಂಗಡಿಗಳಿಗೆ ಹೋಗುತ್ತಿದ್ದೆವು.  ಇಲ್ಲಿ ನಾವು ಕೆಲವು ಅಂಶಗಳನ್ನು ಗಮನಿಸಬಹುದು.  ಇಲ್ಲಿ ವ್ಯಾಪಾರ ಮಾಡುವಾಗ, ಅಂಗಡಿಯವನೊಂದಿಗೆ ಒಂದು ತರಹದ ಭಾಂಧವ್ಯ ಬೆಳೆಯುತ್ತಿತ್ತು.  ಅಷ್ಟೇ ಅಲ್ಲ, ನಾವು ಸಹ ಇಂತಹ ಅಂಗಡಿಗಳಲ್ಲಿ ಎಷ್ಟು ಬೇಕೋ  ಅಷ್ಟೇ ತೆಗೆದುಕೊಳ್ಳುತ್ತಿದ್ದೆವು.  (ದುಡ್ಡು ತೆಗೆದುಕೊಂಡು ಹೋಗುವುದು ಮರೆತರೂ, ಪರಿಚಯದವರು ಎಂದು, ಆಮೇಲೆ ಕೊಡಬಹುದಿತ್ತು) .

ಆದರೆ ಇಂತಹ ಸ್ಥಳೀಯ ರಿಟೇಲ್ ವ್ಯವಸ್ಥೆಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಲಾಭವಿದೆ. ದುಡ್ಡು ಎಲ್ಲರಿಗು ಚಲಾವಣೇಯಾಗುತ್ತಿದೇ. ಪ್ರತಿಯೊಬ್ಬನೂ ಕೂಡ ಇಂತಹ ವ್ಯಪಾರ ಶುರು ಮಾಡಿ ಸ್ವಂತ ಉದ್ದಿಮೆ ಮಾಡಬಹುದು. ಇದರಿಂದ ಕೋಟ್ಯಾಂತರ ಭಾರತೀಯರು ಜೀವನ ಮಾಡುತ್ತಿದ್ದಾರೆ. ಗಾಂಧಿ ಕನಸಿನಂತೆ, ಸಂಪತ್ತು ಎಲ್ಲರಲ್ಲೂ ಹಂಚುತ್ತದೆ.

ಈಗ ಬಂತು ನೋಡಿ, ಮಾಲ್ ಸಂಸ್ಕೃತಿ - ಇದರಿಂದ ಎಲ್ಲ ಸಾಮಗ್ರಿಗಳು ಒಂದೆಡೆ ಸಿಗಬಹುದು. ಆದರೆ ಇದರಿಂದ ನಷ್ಟವೂ ಇದೆ. ಕೋಟ್ಯಂತರ ಜನರಲ್ಲಿ ಹಂಚಿ ಹೋಗುವ ದುಡ್ಡು ಕೇವಲ, ಕೆಲವೇ ಜನರಿಗೆ ಹೋಗುತ್ತದೆ. ಮೇಲೆ ಹೇಳಿದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ (ಮುಂದೆ ಕಳೆದುಕೊಳ್ಳುವರು ಕೂಡ). ಅಮೀಷಗಳನ್ನು ಒಡ್ಡಿ,  ಕೊಳ್ಳೆಬಾಕ ಸಂಸ್ಕೃತಿ ಹೆಚ್ಚಿಸುತ್ತಿದ್ದಾರೆ.



ಇವರುಗಳಿಂದ ಒಂದು ರೀತಿ, ಭಾಷೆಯೂ ಸಾಯುತ್ತದೆ. ದೇಶದ ಎಲ್ಲೆಡೆ ವ್ಯಾಪಾರ ಮಾಡಬೇಕೆಂದು - ಇಂಗ್ಲಿಷ್, ಹಿಂದಿಯನ್ನೇ ಹೆಚ್ಚಾಗಿ ಬಳಸುತ್ತಾರೆ.  ವಲಸೆ ಬಂದವರಿಗೆ - ಸಾಮಾನ್ಯ ಜನರೊಟ್ಟಿಗೆ ಮಾತನಾಡುವ ಅವಶ್ಯಕತೆಯೇ ಇಲ್ಲದಂತೆ ಮಾಡುತ್ತಾರೆ.


ಗೆಳೆಯರೇ, ನಾವುಗಳು ಆದಷ್ಟು ಈ  ಮಾಲ್ ಗಳನ್ನೂ ಬಿಟ್ಟು, ಸ್ಥಳಿಯರೊಂದಿಗೆ ವ್ಯವಹರಿಸೋಣವೇ?

Monday, August 9, 2010

ಭಾವಸಾರ ಕ್ಷತ್ರಿಯರು, ನನ್ನ ಸ್ನೇಹಿತ ಹಾಗೂ ಕನ್ನಡ

ನನಗೆ ಇತಿಹಾಸ ಓದುವುದು, ರಾಷ್ಟ್ರಗಳ ಬಗ್ಗೆ ತಿಳಿಯುವ ಹವ್ಯಾಸ. ಹೀಗೆಯೇ ನಾನು ಪಾಕಿಸ್ತಾನದ, ಹಿಂದೂ ಚರಿತ್ರೆಯ ಬಗ್ಗೆ ಸ್ವಲ್ಪ ಓದಿದ್ದೇನೆ.  ಅಲ್ಲಿ ಇರಾನ್ ಪಕ್ಕ ಇರುವ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ  "ಹಿಂಗಲ್ಗಂಜ್ ಮಾತೆ" ಅನ್ನುವ ಒಂದು ಪ್ರಸಿದ್ಧ ಯಾತ್ರ ಸ್ಥಳವಿದೆ. 

ನನ್ನ ಕಚೇರಿಯಲ್ಲಿ, ನನ್ನ ಒಬ್ಬ ಸ್ನೇಹಿತನಿದ್ದ. ಕೂತೊಹಲದಿಂದ ಅವನ ಬಗ್ಗೆ ವಿಚಾರಿಸಿದಾಗ ಅವನ್ದು "ಭಾವಸಾರ ಕ್ಷತ್ರಿಯ" ಪಂಗಡ ಅಂತ ಹೇಳಿದ.  ಮುಂದೆ  ವಿಚಾರಿಸಿದಾಗ ಅವರ ಮನೆ ದೇವರು "ಹಿಂಗಲ್ಗಂಜ್ ಮಾತೆ",  ಎಂದ . 
ಒಂದು ಕ್ಷಣ ನನಗೆ ಆಶ್ಚರ್ಯ !!! .  ಇರಾನಿನ ಗಡಿಯಲ್ಲಿ, ಪಾಕಿಸ್ತಾನದಲ್ಲಿ ಇರುವ ದೇವತೆ, ಇವರ ಮನೆ ದೇವರು. ತಕ್ಷಣ ನಾನು "ಹಿಂಗಲ್ಗನ್ಜಾ ?" ಎಂದು ಜೋರಾಗಿ ಕೇಳಿದೆ.  ನಾನು ಆ ರೀತಿ ಹೇಳಿದ್ದಕ್ಕೆ ಅವನಿಗೂ ಆಶ್ಚರ್ಯವಾಯಿತು.

ಅಯ್ಯೋ ಇವರು ಸಾವಿರಾರು ಕಿಲೋಮೀಟರು ದೂರವಿರುವ ಕನ್ನಡ ನಾಡಿಗೆ, ಯಾವಗ ಎಲ್ಲಿಂದ ಬಂದರಪ್ಪ ಅಂತ ಯೋಚನೆ ಬಂತು. ಅದಕ್ಕೆ ಅವನಿಂದ ಉತ್ತರ ದೊರೆಯಲಿಲ್ಲ. ಬಹುಶಃ ೭ನೇ ಶತಮಾನದಲ್ಲಿ, ಮುಹಮ್ಮದ್ ಬಿನ್ ಕಾಸಿಮ್ ಆಕ್ರಮಣ ಹಾಗೊ ಮತಾಂತರ ಶುರು ಮಾಡಿದಾಗೆ, ಇವರ ವಲಸೆ ಶುರುವಾಗಿರಬಹುದು ಎಂದುಕೊಂಡೆ.

ಇವರಂತೆ ದೇಶ ಬಿಟ್ಟ ಇಸ್ರೇಲಿಗಳ ನೆನಪಾಯಿತು. ಕೇಳಿದೆ "ನಿಮ್ಮ ಜನರಿಗೆ ಇಸ್ರೆಲಿಗಳಂತೆ ಪುನಃ ನಿಮ್ಮ ದೇಶಕ್ಕೆ ಮರುಳಲು ಅಸಕ್ತಿಯಿಲ್ಲವೇ, ಇಷ್ಟವಿಲ್ಲವೇ?"

ಅವನೆಂದ - "ಅದೆಲ್ಲ ನನಗೆ ಗೊತ್ತಿಲ್ಲ, ಯೋಚನೆಯೂ ಇಲ್ಲ. ಈಗ ನಾನೊಬ್ಬ ಅಪ್ಪಟ ಕನ್ನಡಿಗ"
ಆಗ ಅವನು ಕೊಟ್ಟ ಉತ್ತರ ಕೇಳಿ ನನಗೆ ಖುಷಿಯೂ ಆಯಿತು (ಎಲ್ಲಿದಲೋ ಬಂದ ವಲಸೆ ಜನರು ನಮ್ಮಲ್ಲಿ ಬೆರೆತಿರುವ ಬಗ್ಗೆ ) , ಸ್ವಲ್ಪ ಬೇಜಾರೂ ಕೂಡ ಆಯಿತು(ಅವನಿಗೆ ತನ್ನ ಪೂರ್ವಜರ ಭೂಮಿಯ ಬಗ್ಗೆ ಇರುವ ಅನಾದರ).


ಇನ್ನೊಂದು ವಿಷಯ: ಬಸವನಗುಡಿಯಲ್ಲಿಯೇ "ಭಾವಸಾರ ಕ್ಷತ್ರಿಯ ಬ್ಯಾಂಕ್" ಇದ್ದರೂ, ಅದರ ಜನರ ಬಗ್ಗೆ , ನನ್ನ ಗೆಳೆಯನೊಂದಿಗೆ ಮಾತನಾಡುವವರೆಗೂ ತಿಳಿದಿರಲಿಲ್ಲ.

Tuesday, July 6, 2010

ನೋಕಿಯಾ ಮೊಬೈಲ್ ನಿಂದ ದೊರೆಯದ ಕನ್ನಡ ಸೇವೆ.

ನೋಕಿಯಾ ಮೊಬೈಲ್, ತನ್ನತ್ತ ಗ್ರಾಹಕರನ್ನು ಸೆಳೆಯಲು ಅಂತರ್ಜಾಲದಲ್ಲಿ "OVI  MUSIC STORE " ಪ್ರಾರಂಭಿಸಿದೆ.   ಇಲ್ಲಿ ಜಗತ್ತಿನ ನಾನಾ ಭಾಷೆಯ ಸಹಸ್ರಾರು ಹಾಡುಗಳು ದೊರೆಯುತ್ತವೆ.  ಇವನ್ನು ನೋಕಿಯಾ ಮತ್ತು ಇತರೆ ಮೊಬೈಲ್ ಗಳಲ್ಲಿ ಡೌನ್ಲೋಡ್ ಮಾಡಿ ಕೇಳಬಹುದು.  ಹಲವಾರು ನೋಕಿಯಾ ಮಾಡೆಲ್ ಗಳಲ್ಲಿ ಹಾಡುಗಳನ್ನು ಇಲ್ಲಿ ಉಚಿತವಾಗಿ ಪಡೆಯಬಹುದು.  ನೋಕಿಯಾ ದವರು ಈ ಹಾಡಿನ ಹಕ್ಕುಗಳನ್ನು , ನಿರ್ಮಾಪಕರಿಂದ ಪಡೆದಿರುತ್ತಾರೆ.  ಹಾಗಾಗಿ ಇಲ್ಲಿ ಕಾಪಿರೈಟ್ ನ ಭಯವಿರುವುದಿಲ್ಲ.

ನಾನು ಕೂಡ ಕನ್ನಡ ಹಾಡುಗಳನ್ನು ಕೇಳಬಹುದು ಎಂದು  ಅಂತಹ ಒಂದು ಮೊಬೈಲ್ ಅನ್ನು (ನೋಕಿಯಾ X6 ) ಕೊಂಡುಕೊಂಡೆ .  ಆದರೆ ನನಗೆ "OVI  " ಅಂತರ್ಜಾಲ ತಾಣಕ್ಕೆ ಹೋದ ಮೇಲೆ ತಿಳಿಯಿತು, ಅಲ್ಲಿ ಇದ್ದುದು ಕೇವಲ  ೧-೨  ಕನ್ನಡ ಹಾಡುಗಳು.   ಇದರಿಂದ ನನ್ನಂತಹ ಕನ್ನಡ ಚಿತ್ರಗೀತೆಯ ರಸಿಕರಿಗೆ ಹಾಗೂ ನಿರ್ಮಾಪಕರಿಗೆ; ಇಬ್ಬರಿಗೂ ನಷ್ಟವಾಗುತ್ತದೆ.

ಹಾಗೆಯೇ ನೋಕಿಯಾ ದವರು GPS ಸೇವೆಗಳನ್ನು ಹಲವಾರು ಭಾಷೆಗಳಲ್ಲಿ ಕೊಡುತ್ತಾರೆ, ಕನ್ನಡವನ್ನು ಬಿಟ್ಟು.

ಇಷ್ಟೇ ಬಿಡಪ್ಪ ಎಂದು ನೀವು ಮುಂದೆ ಹೋಗಿ,  ನೋಕಿಯಾ ಬ್ರೌಸೆರ್ ನಲ್ಲಿ ಕನ್ನಡ ಅಂತರ್ಜಾಲ ತಾಣ ತೆಗೆದರೆ, ಅಲ್ಲಿ ಕಾಣುವುದು, ಕನ್ನಡದ ಅಕ್ಷರದ ಬದಲಿಗೆ, ಬರಿ ಡಬ್ಬಗಳು. ಕನ್ನಡ ಅಕ್ಷರಗಳನ್ನು ನೋಕಿಯಾ ಬ್ರೌಸೆರ್ ಬೆಂಬಲಿಸುವುದಿಲ್ಲ.

ಮೇಲಿನ ಎಲ್ಲ ಸೌಲಭ್ಯವನ್ನು ಕನ್ನಡದಲ್ಲಿ ಆಗ್ರಹಿಸಿ, ನೋಕಿಯಾ ದವರಿಗೆ ಮಿಂಚೆಯನ್ನು ಕೊಳುಹಿಸೋಣವೇ?  (ನೋಕಿಯಾ  ಮೊಬೈಲ್ ಇಲ್ಲದವರು, ನೋಕಿಯಾ ಮೊಬೈಲ್ ಕೊಳ್ಳುವ ಯೋಚನೆ ಇದೆಯಂದು ಮಿಂಚೆ ಕಳುಹಿಸಬಹುದು)


ದೂರನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ :
http://support.ovi.com/index.php?id=contact&lang=en_GB&countrycode=ಇಂಡಿಯಾ

Wednesday, January 27, 2010

Now it is "Muni-shri Tarun sagar-jee's" turn

"ವಿಜಯ ಕರ್ನಾಟಕ"ದಲ್ಲಿ  ೨೭-೦೧-೨೦೧೦   ಪ್ರಕಟವಾದ ಮುನಿಶ್ರೀ ತರುಣಸಾಗರ ಜೀ ಅವರ ಲೇಖನ.

"ಹಿಂದಿ ರಾಷ್ಟ್ರಭಾಷೆಯಾಗಿದೆ. ಹಿಂದಿಗೆ ಅವಮಾನ ಮಾಡಿದರೆ ಅದು ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ .................................................
 ಮರಾಠಿ ಮಹಾರಾಷ್ಟ್ರದ ಮುಖ್ಯ ಭಾಷೆ. ನಮಗೆ ನಮ್ಮ ಭಾಷೆ ಬಗ್ಗೆ ಹೆಮ್ಮೆ ಇರಬೇಕು. ಆದರೆ ಹಿಂದಿ ಅಮ್ಮನಾದರೆ  ಮರಾಠಿ ಚಿಕ್ಕಮ್ಮ ಇದ್ದಂತೆ ಎಂಬುದನ್ನು  ಯಾರು ಬರೆಯಬಾರದು. ತಾಯೀಯ ಸ್ಥಾನ ಚಿಕ್ಕಮನಿಗಿಂತಲೂ ಮಿಗಿಲಾಗಿರುತ್ತದೆ."


ಅಬ್ಬ!! ಇಷ್ಟು ದಿನ ಈ ಮಹಶಯನಿಂದ ಈ ಮೇಲಿನ ಪ್ರವಚನ ಕೆಳುವುದೊಂದು ಬಾಕಿ ಇತ್ತು. ಈಗ ಕನ್ನಡಿಗರ ಜನ್ಮ ಪಾವನವಾಗಿದೆ.
ತಾಯೀ ಯಾರು ಚಿಕ್ಕಮ್ಮ ಯಾರು ಅಂತ ಈತನಿಂದ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಅಲ್ಲ ತರುಸಗರ್ ಜೀ ಅವರೇ  ಎಲ್ಲರು ಮೊದಲು ಕಲಿಯುವ ಭಾಷೆಯನ್ನು ಮಾತೃಭಾಷೆ ಅನ್ನುತ್ತಾರೆ ಹೊರತು ದೊಡ್ಡಮ್ಮ  ಚಿಕ್ಕಮ್ಮ ಭಾಷೆ ಎಂದಲ್ಲ. ಮೇಲಾಗಿ ಗುಜುರಾತ್ ಉಚ್ಚನ್ಯಾಯಾಲಯವೇ ತೀರ್ಪಿತ್ತಿದೆ - ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು
"http://www.deccanherald.com/content/48899/hindi-not-national-language-gujarat.html". ದಯವಿಟ್ಟು ಇದನ್ನು ತಿಳಿಯಿರಿ.

ಮೊದಲೇ ಇಂಗ್ಲಿಷ್ ನಿಂದ ಮೂಲೆಗುಂಪಾಗಿರುವ ಭಾರತೀಯ ಭಾಷೆಗಳ ಮೇಲೆ, ತಮ್ಮ ಮಾತೃಭಾಷೆ ಹಿಂದಿಯನ್ನು  "ರಾಷ್ಟ್ರಭಾಷೆ" ಅನ್ನುವ ಹಿಂಬಾಗಿಲಿನಿಂದ ಹೇರಬೇಡಿ.

ತಾವು ತಮ್ಮ ಪ್ರವಚನವನ್ನು ಕೇವಲ ಅಧ್ಯಾತ್ಮಕ್ಕೆ ಸ್ಥಿಮಿತಗೊಳಿಸಿದರೆ ಕನ್ನಡಿಗರಿಗೆ ದೊಡ್ಡ ಉಪಕಾರವಾಗುತ್ತದೆ.

Tuesday, January 26, 2010

Avatar movie

ಸ್ನೇಹಿತರೆ, 

"ಅವತಾರ್" ಚಲನಚಿತ್ರವು  ಸಿನಿಮಾ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಅದರ ಕತೆ, ಪಾತ್ರಗಳು, ಗ್ರಾಫಿಕ್ಸ್ - ಎಲ್ಲವು ಕೂಡ ಸಿನಿಮಾ ಪ್ರಪಂಚದ ಅದ್ಭುತ ಎಂದು ಹೊಗಳಿದ್ದಾರೆ. ಹಣಗಳಿಕೆಯಲ್ಲಿ "ಟೈಟಾನಿಕ್ " ನಂತರ ದಾಖಲೆಯನ್ನು ಹಿಂಬಾಲಿಸುತ್ತಿದೆ. ಈಗ ನಾನು ಚರ್ಚೆ ಮಾಡುತ್ತಿರುವುದು ಈ ಮೇಲಿನ ಯಾವುದೇ ವಿಷಯದ ಮೇಲು ಅಲ್ಲ.

ಇದನ್ನು ನೋಡಿ -
http://ibnlive.in.com/news/avatar-scares-china-films-2d-version-blocked/108890-8.html

ಈ ಮೇಲಿನ ಮಿಂಚೆ , "ಅವತಾರ್" ಸಿನಿಮಾದ "೨-d" ಅವತರಣಿಕೆಯ ಪ್ರದರ್ಶನವನ್ನು ಚೀನಾದಲ್ಲಿ ನಿಲ್ಲಿಸಿದ್ದಾರೆ ಎಂದು ಹೇಳುತ್ತದೆ. ಅದಕ್ಕೆ ಕಾರಣ - "ಈ ಚಿತ್ರದಲ್ಲಿ ಮಾನವರ ಪಾತ್ರವು ಚೀನಾ ಸರ್ಕಾರದ ದೌರ್ಜನ್ಯವನ್ನು ಪ್ರತಿನಿದಿಸುತ್ತದೆ."

ಅಲ್ಲ ಗುರುವೇ, ಈ ಮಿಂಚೆಯನ್ನು ಓದಿದ ಯಾರಿಗಾದರು ಅನಿಸುತ್ತದೆ - ಹಾಗಾದರೆ "೩-D " ಚಿತ್ರದ ಪ್ರದರ್ಶನವನ್ನು ಯಾಕೆ ನಿಲ್ಲಿಸಿಲ್ಲ. ಇದಾನ್ನು ಯೋಚನೆ ಮಾಡುವ ಶಕ್ತಿಯು ನಮ್ಮ ವರದಿಗಾರರಿಗೆ ಇಲ್ಲವೇ. ಇಂತಹ "anti-china" ಸುದ್ದಿಗಳು ಎಲ್ಲೋ ಯುರೋಪೆನಲ್ಲೋ, ಅಮೆರಿಕಾದಲ್ಲೋ ಹುಟ್ಟಿರುತ್ತವೆ. ಅದನ್ನೇ ಯೋಚನೆ ಮಾಡದೆ ಯಥಾವತ್ತಾಗಿ ಬರೆಯುತ್ತವೆ.

ಅಂತು ಕೊನೆಗೆ, ವೆಬ್-ಸೈಟ್ ನವರು  ಚೀನಾ ಸರ್ಕಾರ ತಾನು ಈ ಚಿತ್ರವನ್ನು ಬ್ಲಾಕ್ ಮಾಡಿಲ್ಲ ಎಂಬ ಹೇಳಿಕೆಯನ್ನು ಪ್ರಕಟಿಸಿವೆ.

"http://ibnlive.in.com/news/govt-not-forcing-avatar-off-screens-says-china/108919-8.html"

ಈಗ ಮತ್ತೊಂದು ವಿಷಯಕ್ಕೆ ಬರೋಣ. ಈ ಚಿತ್ರದೊಂದಿಗೆ ಎಲ್ಲ ಪಾಶ್ಚಿಮಾತ್ಯರಿಗೆ ಒಂದು ಸಂದೇಶ ಹೋಗಬೇಕಿತ್ತು. "ಈಗ ತಾವಿರುವ - ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಇವೆಲ್ಲವು ಕೂಡ, ಬೇರೊಂದು ಜನಾಂಗ, ಸಂಸ್ಕೃತಿಯನ್ನು ನಾಶಪಡಿಸಿ ಕಟ್ಟಲಾಗಿದೆ, ಅವರನ್ನು ಅಟ್ಟಾಡಿಸಿ ಕೊಂದು, ಅತ್ತ್ಯಾಚರವೆಸಾಗಿ ನಾಶದಂಚಿಗೆ ತಳ್ಳಲಾಗಿದೆ ಎಂದು (ತೇಟ್ ಸಿನಿಮಾದಲ್ಲಿ ತೋರಿಸಿದ ಹಾಗೆ)".  ಆದರೆ ಇದು ಎಲ್ಲೂ ಬಂದಹಾಗಿಲ್ಲ.

ಸಮಯವಿದ್ದರೆ ಇದನ್ನು ಸ್ವಲ್ಪ ಓದಿ -
http://en.wikipedia.org/wiki/Native_Americans_in_the_United_States
http://en.wikipedia.org/wiki/American_Indian_Wars

ಅದಕ್ಕೆ ಅಲ್ಲವೇ - "ವೇದಾಂತ ಹೇಳೋಕೆ,  ಬದನೆ ಕಾಯಿ ತಿನ್ನೋಕೆ"  :-)