Wednesday, August 11, 2010

ಮಾಲ್ ಗಳು ಹಾಗೂ ಸ್ಥಳೀಯ ವ್ಯಾಪಾರ

ಜಾಗತಿಕರಣದಿಂದ ಸ್ಥಳೀಯ ವ್ಯಾಪಾರಕ್ಕೆ ಆಗುತ್ತಿರುವೆ ತೊಂದರೆಗಳೆಲ್ಲ ನಮಗೆ ಗೊತ್ತಿದೆ.


ಆದರೆ ಈಗ ನಮ್ಮ ಸ್ಥಳೀಯ ವ್ಯಾಪಾರಕ್ಕೆ ತೊಂದರೆ ಆಗುತ್ತಿರುವುದು, ಯಾವುದೋ ವಿದೇಶಿ ಕಂಪನಿಯಿಂದಲ್ಲ.  ನಮ್ಮದೇ ಆದ "ರಿಲೆಯನ್ಚೆ ಫ್ರೆಶ್", "ಸ್ಪಾರ್", "ಫುಡ್ ವರ್ಲ್ಡ್", "ಟೋಟಲ್", "ಈ-ಜೊನೆ"  - ಇವುಗಳಿಂದ.
ಇಂತಹವುಗಳಿಂದ ನಮ್ಮ ದೇಶದ ಅರ್ಥಿಕ ಸ್ಥಿತಿಯೇ ಬದಲಾಗುತ್ತಿದೆ,  ಇವರುಗಳ ಹಿಡಿತಕ್ಕೆ ಜಾರುತ್ತಿದೆ.

ಒಮ್ಮೆ ಯೋಚನೆ ಮಾಡಿ. ನಾವು ದಿನ ಬೆಳಿಗ್ಗೆ ಎದ್ದು,  ಸೊಪ್ಪು ಮಾರುವವನಿಂದ,  ತರಕಾರಿ ಗಡಿಯವನಿಂದ, ಮನೆ ಪಕ್ಕದ ಸಣ್ಣ ದಿನಸಿ ಅಂಗಡಿಯವನಿಂದ,  ಸಾಕಷ್ಟು ಪದಾರ್ಥಗಳನ್ನು ಕೊಳ್ಳುತ್ತಿದ್ದೆವು.  ಟಿವಿ, ಕಂಪ್ಯೂಟರ್, ವಿದ್ಯುನ್ಮಾನ ಸಾಮಗ್ರಿಗಳು ಬೇಕೆಂದರೂ ಸಹ ಮನೆಯ ಹತ್ತಿರದ ಅಂಗಡಿಗಳಿಗೆ ಹೋಗುತ್ತಿದ್ದೆವು.  ಇಲ್ಲಿ ನಾವು ಕೆಲವು ಅಂಶಗಳನ್ನು ಗಮನಿಸಬಹುದು.  ಇಲ್ಲಿ ವ್ಯಾಪಾರ ಮಾಡುವಾಗ, ಅಂಗಡಿಯವನೊಂದಿಗೆ ಒಂದು ತರಹದ ಭಾಂಧವ್ಯ ಬೆಳೆಯುತ್ತಿತ್ತು.  ಅಷ್ಟೇ ಅಲ್ಲ, ನಾವು ಸಹ ಇಂತಹ ಅಂಗಡಿಗಳಲ್ಲಿ ಎಷ್ಟು ಬೇಕೋ  ಅಷ್ಟೇ ತೆಗೆದುಕೊಳ್ಳುತ್ತಿದ್ದೆವು.  (ದುಡ್ಡು ತೆಗೆದುಕೊಂಡು ಹೋಗುವುದು ಮರೆತರೂ, ಪರಿಚಯದವರು ಎಂದು, ಆಮೇಲೆ ಕೊಡಬಹುದಿತ್ತು) .

ಆದರೆ ಇಂತಹ ಸ್ಥಳೀಯ ರಿಟೇಲ್ ವ್ಯವಸ್ಥೆಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಲಾಭವಿದೆ. ದುಡ್ಡು ಎಲ್ಲರಿಗು ಚಲಾವಣೇಯಾಗುತ್ತಿದೇ. ಪ್ರತಿಯೊಬ್ಬನೂ ಕೂಡ ಇಂತಹ ವ್ಯಪಾರ ಶುರು ಮಾಡಿ ಸ್ವಂತ ಉದ್ದಿಮೆ ಮಾಡಬಹುದು. ಇದರಿಂದ ಕೋಟ್ಯಾಂತರ ಭಾರತೀಯರು ಜೀವನ ಮಾಡುತ್ತಿದ್ದಾರೆ. ಗಾಂಧಿ ಕನಸಿನಂತೆ, ಸಂಪತ್ತು ಎಲ್ಲರಲ್ಲೂ ಹಂಚುತ್ತದೆ.

ಈಗ ಬಂತು ನೋಡಿ, ಮಾಲ್ ಸಂಸ್ಕೃತಿ - ಇದರಿಂದ ಎಲ್ಲ ಸಾಮಗ್ರಿಗಳು ಒಂದೆಡೆ ಸಿಗಬಹುದು. ಆದರೆ ಇದರಿಂದ ನಷ್ಟವೂ ಇದೆ. ಕೋಟ್ಯಂತರ ಜನರಲ್ಲಿ ಹಂಚಿ ಹೋಗುವ ದುಡ್ಡು ಕೇವಲ, ಕೆಲವೇ ಜನರಿಗೆ ಹೋಗುತ್ತದೆ. ಮೇಲೆ ಹೇಳಿದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ (ಮುಂದೆ ಕಳೆದುಕೊಳ್ಳುವರು ಕೂಡ). ಅಮೀಷಗಳನ್ನು ಒಡ್ಡಿ,  ಕೊಳ್ಳೆಬಾಕ ಸಂಸ್ಕೃತಿ ಹೆಚ್ಚಿಸುತ್ತಿದ್ದಾರೆ.



ಇವರುಗಳಿಂದ ಒಂದು ರೀತಿ, ಭಾಷೆಯೂ ಸಾಯುತ್ತದೆ. ದೇಶದ ಎಲ್ಲೆಡೆ ವ್ಯಾಪಾರ ಮಾಡಬೇಕೆಂದು - ಇಂಗ್ಲಿಷ್, ಹಿಂದಿಯನ್ನೇ ಹೆಚ್ಚಾಗಿ ಬಳಸುತ್ತಾರೆ.  ವಲಸೆ ಬಂದವರಿಗೆ - ಸಾಮಾನ್ಯ ಜನರೊಟ್ಟಿಗೆ ಮಾತನಾಡುವ ಅವಶ್ಯಕತೆಯೇ ಇಲ್ಲದಂತೆ ಮಾಡುತ್ತಾರೆ.


ಗೆಳೆಯರೇ, ನಾವುಗಳು ಆದಷ್ಟು ಈ  ಮಾಲ್ ಗಳನ್ನೂ ಬಿಟ್ಟು, ಸ್ಥಳಿಯರೊಂದಿಗೆ ವ್ಯವಹರಿಸೋಣವೇ?

4 comments:

  1. irabahudu. adare if there is no competition from elsewhere, it will take ages for our local people to reach there.

    ReplyDelete
  2. ನಮಸ್ಕಾರ

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
    ನೀವು ಹೇಳಿದಂತೆ ಸ್ಪರ್ಧೆ ಬೇಕು, ಆದರೆ ಎಲ್ಲ ವಿಷಯಗಳಲ್ಲಿ ಸ್ಪರ್ಧೆಯ ಅವಶಕತೆಯಿಲ್ಲ. ಕೆಲವೆಡೆ ನಾವು ಅದನ್ನು ತಡೆಯಬೇಕು.

    ಈ ಉದ್ದೇಶಕ್ಕಾಗಿಯೇ "ANTI DUMPING " ಡ್ಯೂಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿದೆ. ಕೋಟ್ಯಂತರ ಜನರಿಗೆ ಉದ್ದಿಮೆ ಕೊಡುವ ಈ ಕ್ಷೇತ್ರವನ್ನು ಸಾಮಾನ್ಯ ಜನರಿಗಾಗಿಯೇ ಮಿಸಲಿಟ್ಟರೆ, ಅವರು ಕೂಡ ಸ್ವಂತ ಉದ್ದಿಮೆ ನಡೆಸಬಹುದು ಎಂದು ನನ್ನ ಅಭಿಪ್ರಾಯ

    ReplyDelete
  3. metro cash and carry, ವಿರೋಧಿಸಿದ ಜನ ಈಗ, ಅದರದೇ ಸ್ವದೇಶೀ ರೂಪವಾದ - ಮಾಲ್ ಗಳನ್ನೂ ಹೀಗೆ ಒಪ್ಪಿಕೊಂಡಿದ್ದಾರೆ ತಿಳಿಯುತ್ತಿಲ್ಲ

    ReplyDelete
  4. Good write up dude !!!!
    Malls will cause a huge problem in the coming days when all small shopkeepers vanishes !!!!!
    I agree completely with the write up

    ReplyDelete